ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು ; ಕರ್ನಾಟಕ ರಾಜ್ಯೋತ್ಸವದ ಅಭಿಯಾನದ ಅಂಗವಾಗಿ ವಿಶ್ವದಾದ್ಯಂತ ಏಕ ಕಾಲದಲ್ಲಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಾ ಕಾರ್ಯಕ್ರಮವನ್ನು ಕನ್ನಡ ಗೀತೆಗಳನ್ನು ಹಾಡುವುದರ ಮುಖಾಂತರ ಆಚರಣೆ ಮಾಡಲಾಯಿತು.
ಗ್ರಾಮದ ಸಾರ್ವಜನಿಕರಿಗೆ ಕನ್ನಡನಾಡಿನ ಕುರಿತು ಅಭಿಮಾನ ಹಾಗೂ ಗೌರವ ಮೂಡಿಸು ಉದ್ದೇಶದಿಂದ ಶಾಲೆಯ ಮಕ್ಕಳು ರಾಜ್ಯದ ವಿವಿಧ ಜಿಲ್ಲೆಗಳ ಕಲೆಯನ್ನು ಬಿಂಬಿಸುವ ವೇಷ ಭೂಷಣಗಳನ್ನು ತೊಟ್ಟು ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಜಾತಾ ಮಾಡುವದರ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಕನ್ನಡವಡವೇ ಸತ್ಯ ಕನ್ನಡವೆ ನಿತ್ಯ,ಕನ್ನಡವೆ ನಮ್ಮಮ್ಮ ಎಂದು ಕನ್ನಡ ನಾಡು ನುಡಿಯ ಬಗ್ಗೆ ವಿವಿಧ ಘೊಷಣೆಗಳನ್ನು ಕೂಗಿದರು. ಮಕ್ಕಳ ವೆಷ ಭೂಷಣಗಳನ್ನು ಗ್ರಾಮಸ್ಥರು ತುಂಬಾ ಕೂತಹಲದಿಂದ ವಿಕಿಕ್ಷಿದರು.
ಈ ಅಭಿಯಾನದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಮತ್ತು ಶಾಲೆಯ ಮಕ್ಕಳು ಭಾಗವಹಿಸುವದರ ಮೂಲಕ ಯಶಸ್ವಿಗೂಳಿಸಿದರು.