ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಜೆ ಡಿ ಎಸ್ ಪಕ್ಷದ ಯುವ ಮುಖಂಡ ಸಿದ್ದು ಬಂಡಿ ಕಟ್ಟಾ ಅಭಿಮಾನಿ ಸುಮಾರು ಹದಿನೈದು ವರ್ಷಗಳಿಂದ ರವರ ಜೊತೆ ಗುರುತಿಸಿಗೊಂಡಿದ್ದ ಜೆ ಡಿ ಎಸ್ ಪಕ್ಷದ ಯುವ ಘಟಕದ ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ ಇಂದು ಜೆ ಡಿ ಎಸ್ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ.
ಕಳೆದ ವರ್ಷ ಸಿದ್ದು ಬಂಡಿಗೆ ಕೊರೋನಾ ಬಂದಾಗ ವಿರೇಶ ಉಪ್ಪಾರ ಅವರ ಸಲುವಾಗಿ ಸುಮಾರು 2 ಕಿ ಮೀ ದೀಡ ನಮಸ್ಕಾರ ಹಾಕಿವ ಮೂಲಕ ಸುದ್ದಿಯಾಗಿದ್ದರು ಅನೇಕ ಜನರಿಗೆ ಜನಪರ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಸಿದ್ದು ಬಂಡಿ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡಿದ್ದರು ವಿರೇಶ ಉಪ್ಪಾರ ಮನೆಯಲ್ಲಿ ಸಿದ್ದು ಬಂಡಿ ಫೋಟೋ ತುಂಬಿವೆ ಸಿದ್ದು ಬಂಡಿ ಮತ್ತು ಜೆಡಿಎಸ್ ಪಕ್ಷದ ಸಂಘಟನೆಗೆ ಸದಾ ಮುಂದೆ ಇರುವವರು ಇಂದು ಜೆಡಿಎಸ್ ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ಯುವ ಘಟಕ ಕಾರ್ಯದರ್ಶಿಗೆ ರಾಜೀನಾಮೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.