ಮಳೆಗೆ ಕುರುಗೋಡು ತಾಲೂಕಿನಲ್ಲಿ 9 ಮನೆ ಕುಸಿತ, 380 ಎಕರೆ ಬೆಳೆ ಹಾನಿ,ಅಸ್ತವ್ಯಸ್ತಗೊಂಡ ಜನಜೀವನ.!

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ
ಕುರುಗೋಡು;ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ 9 ಮನೆ ಕುಸಿದು ಬಿದ್ದಿದ್ದು, ಯಾವುದೇ ದಾರುಣ ಘಟನೆಗಳು ತಾಲೂಕಿನಲ್ಲಿ ಸಂಭಾವಿಸಿಲ್ಲ.
ತಾಲೂಕಿನ ಬೈಲೂರ್, ವದ್ದಟ್ಟಿ, ಗುತ್ತಿಗನೂರು, ಗೆಣಿಕೆಹಾಳ್, ಕ್ಯಾದಿಗೆ ಹಾಳ್, ವೇಣಿವಿರಾಪುರ ಸೇರಿದಂತೆ ತಾಲೂಕಿನದ್ಯಂತ ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದು ಜನ ಜೀವನ ಅಸ್ತವ್ಯಸ್ಥ ಗೊಂಡಿದ್ದು ಯಾವುದೇ ಪ್ರಾಣ ಹಾನಿಗೊಂಡಿಲ್ಲ. ಪ್ರಾಥಮಿಕ ವರದಿಯಲ್ಲಿ ಯಾವುದೇ ಮನೆ ಕುಸಿದ ರೈತರ ಹೆಸರುಗಳು ತಿಳಿದು ಬಂದಿಲ್ಲ ಪರಿಶೀಲನೆ ನಡೆಸಿದ ನಂತರ ಹೆಸರುಗಳು ತಿಳಿದು ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ತಾಲೂಕಿನಲ್ಲಿ ಜಿಟಿ ಜಿಟಿ ಮಳೆಯಿಂದ ಸುಮಾರು ಅಂದಾಜು 380 ಎಕರೆ ಭತ್ತ ಹಾಗೂ 8 ಹೆಕ್ಟರ್ ಮೆಣಿಸಿನಕಾಯಿ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ.
ರೈತರು ಕಟಾವು ಮಾಡಿ ಹಾಕಿದ್ದ ಮೆಣಿಸಿನಕಾಯಿ ಗಳಲ್ಲಿ ನೀರು ನುಗ್ಗಿವೆ ಇನ್ನೂ ಭತ್ತ ಕಟಾವು ಮಾಡಿ ರಸ್ತೆಗಳಲ್ಲಿ ಹಾಕಿದ್ದ ಭತ್ತದ ನಲ್ಲು ಗಳು ಕೂಡ ತೊಳಿದು ಹೋಗಿವೆ ಅದರಲ್ಲಿ ಭತ್ತ ಕಟಾವು ಅಂತಕ್ಕೆ ಬಂದಿದ್ದ ಬೆಳೆಯು ಮಳೆಗೆ ನೆಲ ಸಮಗೊಂಡಿವೆ ಇದರಿಂದ ರೈತರ ಬದುಕು ಚಿಂತಾಜನಕವಾಗಿದೆ. ಹಳ್ಳಿಗಳಲ್ಲಿ ಮನೆ ಕುಸಿದು ಬಿದ್ದು ಹಾನಿಗೆ ಒಳಗಾದ ಸ್ಥಳಕ್ಕೆ ಮತ್ತು ಭತ್ತದ ಗದ್ದೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳಿಗೆ ತಿಳಿಸಿ ಬೆಳೆ ಪರಿಹಾರ ಒದಗಸಿಲು ತಿಳಿಸಿದರು.
ಇನ್ನೂ ಗ್ರಾಮಗಳಲ್ಲಿ ಮಳೆಗೆ ಮನೆಗಳು ಕುಸಿಯೋ ಹಂತದಲ್ಲಿರುವ ಮನೆಗಳ್ಳನ್ನು ತೆರವುಗೊಳಿಸಿ ಅಂತಹ ಕುಟುಂಬಗಳಿಗೆ ಗ್ರಾಮದಲ್ಲಿರುವ ಸಮುದಾಯ ಭವನ ಗಳಲ್ಲಿ ಅಥವಾ ಶಾಲೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಾಗಲಿ ಅವರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುರುಗೋಡು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದ್ದಾರೆ.

Share and Enjoy !

Shares