ಸಿಹಿ ಹಂಚಿ ಸಂಭ್ರಮ ಆಚರಸಿದ ನಿಷ್ಠಿರುದ್ರಪ್ಪ ಅವರ ಬೆಂಬಲಿಗರು

Share and Enjoy !

Shares
Listen to this article

 

ಬಳ್ಳಾರಿ :ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಕಸಾಪ ಚುನಾವಣೆ ರಾಜ್ಯದಾದ್ಯಂತ ಇಂದು ನಡೆಯಿತು.
ಬಳ್ಳಾರಿ ಗಣಿ ನಾಡು ನಿಷ್ಠಿ ರುದ್ರಪ್ಪ ಮತ್ತು ಸಿದ್ಧರಾಮ ಕಲ್ಮಠ ಅವರ ಬೆಂಬಲಿತ ಅಭ್ಯರ್ಥಿ ಟಿ ಎಂ ಪಂಪಾಪತಿ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು
ಅಲ್ಲದೆ ಪ್ರತಿಯೊಬ್ಬ ಮತದಾರರು ಯಾವ ಕಡೆ ಒಲವು ತೋರುತ್ತಾರೆ ಎಂಬ ಕುತೂಹಲವಿತ್ತು
ಈ ಪ್ರತಿಷ್ಠೆಯ ಕಣ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದ್ದು ಸ್ಪಷ್ಟ ಬಹುಮತದಿಂದ ನಿಷ್ಠಿರುದ್ರಪ್ಪ ಗೆಲುವಿನ ನಗೆ ಬೀರಿದ್ದಾರೆ.
ನಿಷ್ಠಿ ರುದ್ರಪ್ಪರ ಗೆಲುವು ಹತ್ತಿರವಾಗುತ್ತಿದ್ದಂತೆ ಅನೇಕ ಬೆಂಬಲಿಗರು ,ಸ್ನೇಹಿತರು ಸಿಹಿಹಂಚಿ ಸಂಭ್ರಮಿಸಿದರು.

Share and Enjoy !

Shares