ಬೆಂಗಳೂರ :ಸಿರುಗುಪ್ಪತಾಲೂಕಿನಾದ್ಯಂತ ನಿರಂತರವಾಗಿ ಸುರಿದ ಧಾರಕಾರ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಇಂದು ಬೆಳಿಗ್ಗೆ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು .
ರೈತರ ಬೆಳೆಗಳಾದ ಭತ್ತ, ಹತ್ತಿ, ಮೆಣಸಿನಕಾಯಿ,ಕಬ್ಬು ಮತ್ತು ಹೂ ತೋಟಗಳು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು
ಈಗಾಗಲೇ ಶೇಕಡಾ 45 ರಷ್ಟು ಭತ್ತ ಕಟಾವು ಆಗಿರುತ್ತದೆ. ಇನ್ನೂ ಶೇಕಡಾ 55 ರಷ್ಟು ಕಟಾವು ಮಾಡಬೇಕಾಗಿದೆ. ಬಾಕಿ ಉಳಿದ ಭತ್ತದಲ್ಲಿ ಶೇಕಡಾ 30 ರಿಂದ 35%, ರಷ್ಟು ಭತ್ತ ಸಂಪೂರ್ಣ ಹಾಳಾಗಿದ್ದು, ಬಾಕಿ ಶೇಕಡಾ 20 ರಿಂದ ಶೇಕಡಾ 25 , ರಷ್ಟು ಭತ್ತ ಕಟಾವು ಹಂತದಲ್ಲಿರುತ್ತದೆ.ಆದ್ದರಿಂದ ತಾವುಗಳು ತ್ವರಿತವಾಗಿರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಮನವಿ ನೀಡಲಾಗಿ ಮುಖ್ಯ ಮಂತ್ರಿಯವರು ರಾಜ್ಯಾದ್ಯಂತ ಮಳೆಹಾನಿಗೊಳಾಗಿರುವ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡಲಾಗವುದೆಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆಂದು ಶಾಸಕ ಎಮ್ ಎಸ್ ಸೋಮಲಿಂಗಪ್ಪನವರು ತಿಳಿಸಿದರು.