ವಿಜಯನಗರ ವಾಣಿ ಸುದ್ದಿ ರಾಯಚೂರು
ಮಸ್ಕಿ : ರಾಯಚೂರು ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್ ಮಸ್ಕಿ ತಾಲೂಕು ಅಮೆಚೂರ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಟ್ಟಣದ ವಿದ್ಯಾನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕುಮಾರ ಹುಲುಗಪ್ಪ ಭಜಂತ್ರಿ ಬಳಗಾನೂರ ರಾಜ್ಯಮಟ್ಟದ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿನಯಕುಮಾರ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ ಬಸವರಾಜ ತೊಂತನಾಳ ,ಉಪಾಧ್ಯಕ್ಷರಾದ ವೀರೇಶ ಗೋನಾಳ ಉಪನ್ಯಾಸಕರಾದ ವಿದ್ಯಾಮನೋಹರ,ಶ್ರೀಧರ ಗುಡಿ,ರಾಮಣ್ಣ ಹಂಪರಗುಂದಿ,ಶ್ರೀನಿವಾಸ ಗುಡಿ, ಅಮರೇಶ ನಾಯಕ, ಶ್ರೀಮತಿ ಭಾರತಿ, ಕುಮಾರಿ ಶ್ರೀದೇವಿ,ನಾಗರತ್ನ,ದುರುಗಪ್ಪ ಮೌನೇಶ, ಅಯ್ಯಪ್ಪ, ಶಿವಪ್ಪ ಸೇರಿದಂತೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.