ಕುರುಗೋಡು. ಡಿ.3ಸಮೀಪದ ಮದಿರೆ ಗ್ರಾಮದ ರೈತ ಎಂ. ಮೋಹನ್ (34) ವರ್ಷ ನಿರಂತರವಾಗಿ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಸಾಲಭಾದೆ ತಾಳಲಾರದೆ ಗುರುವಾರ ರಾತ್ರಿ ವಿಷ ಸೇವಿಸಿದ್ದಾನೆ. ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೋಯ್ದಿದ್ದಾರೆ. ಚಿಕಿತ್ಸೆ ಪಾಲಕರಿಯಾಗದೆ ಶುಕ್ರವಾರ ಬೆಳಿಗ್ಗೆ ಕೊನೆಯುಸಿರು ಎಳೆದಿದ್ದಾನೆ.
ರೈತನ ತಾಯಿ ಶೈಲಮ್ಮ ಹೇಸಿರಿನಲ್ಲಿ 11.9 ಎಕರೆ ಭೂಮಿ ಇದ್ದು, ಮೆಣಿಸಿನಕಾಯಿ ಬೆಳೆ ಬೆಳೆದಿದ್ದಾನೆ. ಮಳೆಯಿಂದ ನಷ್ಟ ವಾಗಿದೆ. ಬೆಳೆಗಾಗಿ ವ್ಯವಸಾಯ ಸೇವಾ ಸಹಕಾರ ಸಂಘ ಕೋಳೂರು ಕೇಂದ್ರದಲ್ಲಿ 3 ಲಕ್ಷ ಸಾಲ ತೆಗೆದುಕೊಂಡಿದ್ದು, ಇನ್ನಿತರ ಹೊರಗಡೆ ಕೈ ಸಾಲ ಮಾಡಿದ್ದಾನೆ. ಹಾಗಾಗಿ ಬೆಳೆಗೆ ಸಾಲ ಮಾಡಿದ್ದನು ಹೇಗೆ ತೀರಿಸೋದು ಎಂದು ಚಿಂತಿಸಿ ನೊಂದು ವಿಷ ಸೇವಿಸಿದ್ದಾನೆಂದು ತಿಳಿದು ಬಂದಿದೆ ಮೃತನ ಅಂತ್ಯ ಕ್ರಿಯೆ ಸ್ವ ಗ್ರಾಮದಲ್ಲಿ ವಿಧಿ ವಿಧಾನಗಳಿಂದ ನೆರೆವೇರಿತು.ಮೃತನಿಗೆ ಪತ್ನಿ ಹಾಗೂ 2 ಹೆಣ್ಣು ಹಾಗೂ 1 ಗಂಡು ಮಕ್ಕಳಿದ್ದಾರೆ. ಮೃತ ರೈತನ ಮನಗೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಜಂಟಿ ಕೃಷಿ ನಿರ್ದೇಶಕರು ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಪಲಾಕ್ಷಿಗೌಡ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ್, ಸಹಾಯಕ ತೋಟಗರಿಕೆ ಅಧಿಕಾರಿ ಯೋಗೀಶ್, ಸಹಾಯಕ ಕೃಷಿ ಅಧಿಕಾರಿ ಎಂ. ದೇವರಾಜ್, ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲಿಸಿ ಪ್ರಾಥಮಿಕ ವರದಿ ಯನ್ನು ಪಡೆದುಕೊಂಡರು.
ಈ ಕುರಿತು ಕುರಿತು ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.