ಕುರುಗೋಡು. ಡಿ.4ಸಮೀಪದ ಚಾನಾಳು ಗ್ರಾಮದ ರೈತ ನರಸಿಂಹ ರೆಡ್ಡಿ (50) ವರ್ಷ ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಸಾಲಭಾದೆ ತಾಳಲಾರದೆ ಶುಕ್ರವಾರ ರಾತ್ರಿ ವಿಷ ಸೇವಿಸಿದ್ದಾನೆ. ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ತೆರಳಿದ್ದಾರೆ. ಚಿಕಿತ್ಸೆ ಪಾಲಕರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ರೈತನಿಗೆ ಸ್ವಂತ 8 ಎಕರೆ ಭೂಮಿ ಇದ್ದು, 22 ಎಕರೆ ಸಾಗುವಳಿ ಮಾಡಿದ್ದಾನೆ ಇದರಲ್ಲಿ 10 ಎಕರೆ ಭತ್ತ ಹಾಗೂ 20 ಎಕರೆ ಮೆಣಿಸಿನಕಾಯಿ ಬೆಳೆ ಬೆಳೆದಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮಳೆಯಿಂದ ನಷ್ಟ ವಾಗಿದೆ. ಬೆಳೆಗಾಗಿ ಬ್ಯಾಂಕ್ ಸೇರಿದಂತೆ ಹೊರಗಡೆ ಒಟ್ಟು 15 ಲಕ್ಷ ಸಾಲ ಮಾಡಿದ್ದಾನೆ. ಹಾಗಾಗಿ ಬೆಳೆಗೆ ಸಾಲ ಮಾಡಿದ್ದನು ಹೇಗೆ ತೀರಿಸೋದು ಎಂದು ಚಿಂತಿಸಿ ನೊಂದು ವಿಷ ಸೇವಿಸಿದ್ದಾನೆ. ಮೃತನ ಅಂತ್ಯ ಕ್ರಿಯೆ ಸ್ವ ಗ್ರಾಮದಲ್ಲಿ ಶನಿವಾರ ವಿಧಿ ವಿಧಾನಗಳಿಂದ ನೆರೆವೇರಲಿದೆ. ಮೃತನಿಗೆ ಪತ್ನಿ ಹಾಗೂ 1 ಗಂಡು ಮಗ ಇದ್ದಾನೆ.
ಈ ಕುರಿತು ಮೋಕಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.