ಅಕ್ರಮ ಮರಳು ಮಾಫೀಯಾಗಳನ್ನು ಮಟ್ಟಹಾಕಿ ! ತನಿಖೆ ತಂಡ ರಚನೆ: ಎಂ.ಗಂಗಾಧರ

Share and Enjoy !

Shares
Listen to this article

ವಿಜಯನಗರ ವಾಣಿ:

ರಾಯಚೂರು ಜಿಲ್ಲೆ:

ಸಿಂಧನೂರು ಅಕ್ರಮ ಮರಳು ದಂಧೇ ನಡೆಯಲು ಪ್ರತ್ಯಕ್ಷ ಬೆಂಬಲಿಸುತ್ತಿರುವ  ಅಧಿಕಾರಿಗಳ ವಿರುದ್ಧ ತನಿಖಾ ಆಯೋಗ ರಚನೆ ಮಾಡಿ ಅಕ್ರಮ ಮರಳು ಮಾಫೀಯಾಗಳನ್ನು ಹಿಡಿದು ಮಟ್ಟ ಹಾಕಬೇಕಾಗಿದೆ. ಸಿಪಿಐಎಂಎಲ್ ರಾಜ್ಯ ಸಮಿತಿ ಸದಸ್ಯ‌ ಎಂ.ಗಂಗಾಧರಆಗ್ರಹಿಸಿದ್ದಾರೆ.

.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು,

ಸಿಂಧನೂರು ತಾಲೂಕಿನ ಕೆಂಗಲ್, ಅಲಬನೂರು,ಗಿಣಿವಾರ,ಒಳಬಳ್ಳಾರಿ, ಗೋನವಾರ,ಮಾಡಸಿರವಾರ,ಸಿಂಗಾಪೂರ್, ಮುಕ್ಕುಂದ,ಚಿತ್ರಾಲಿ,ಆಯುನೂರು,ಸೇರಿದಂತೆ ಇತರೆ ಭಾಗಗಳಲ್ಲಿ ಮರಳು ದಂಧೇ ಕೋರರು ಹಗಲು ರಾತ್ರಿ ಎನ್ನದೆ   ರಾಜಾ ರೋಷವಾಗಿ  ಅಕ್ರಮವಾಗಿ ಮರಳು

ಸಾಗಾಣಿಕೆ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಮೌನವಹಿಸಿರುವುದು ವಿಷಾದನೀಯವಾಗಿದೆ.

ಈ ಮರಳು ದಂಧೇಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಸಂಬಂಧಿಸಿದ ಅಧಿಕಾರಿಗಳಿಗೆ  ಮಾಮೂಲು ಕೊಡುತ್ತೆವೆ ಎಂದು ರಾಜಾ ರೋಷವಾಗಿ ಹೇಳುವ ಕೆಲವು ಮರಳು ದಂಧೆಕೋರರಿಗೆ ಯಾರ ಭಯವು ಇಲ್ಲದಾಗಿದೆ.

ಕಾರಣ ಕೂಡಲೇ ಇದರ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು  ಸೂಕ್ತ ತನಿಖೆಗಾಗಿ ತಂಡ ರಚನೆ ಮಾಡಬೇಕೆಂದು ಸಿಪಿಐ(ಎಂಎಲ್)ರಾಜ್ಯ ಸಮಿತಿ ಕರ್ನಾಟಕ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

 

Share and Enjoy !

Shares