15 ರಿಂದ 18 ವಯಸ್ಸಿನ ಎಲ್ಲಾ ಮಕ್ಕಳು ಲಸಿಕೆ ಪಡೆಯಲು :ದಂಡಾಧಿಕಾರಿ ಮಂಜುನಾಥ ಭೋಗಾವತಿ ಕರೆ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ..

ರಾಯಚೂರು ಜಿಲ್ಲೆ. .

 

ಸಿಂಧನೂರು:  ಕೋವಿಡ್ ಲಸಿಕೆ ಅಭಿಯಾನದ ಪ್ರತಿಯೊಂದು ಸರಕಾರಿ ,ಖಾಸಗಿ ಶಾಲಾ-ಕಾಲೇಜುಗಳ

ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿ  15 ರಿಂದ 18 ವಯಸ್ಸಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ತಾಲೂಕು ದಂಡಾಧಿಕಾರಿ ಮಂಜುನಾಥ ಭೋಗಾವತಿ ಕರೆ ನೀಡಿದರು..

ತಾಲೂಕಿನ ಆರ್ ಹೆಚ್ ನಂ 3 ರಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ  ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಆಯೋಜನೆ ಮಾಡಲಾಗಿತ್ತು. ಶಾಸಕ ವೆಂಕಟರಾವ್ ನಾಡಗೌಡ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೊದಲನೇ ಕೋವಿಡ್ ಅಲೆ ಯಿಂದ ಉಂಟಾದ ಸಾವು ನೋವುಗಳು ಜನರು ಕಂಡರೂ ಕೂಡ ಸರ್ಕಾರ, ವೈದ್ಯರು ಹಾಗೂ ಅಧಿಕಾರಿಗಳು ನೀಡಿದ ಸಲಹೆ ಸೂಚನೆಗಳನ್ನು ಪಾಲನೆ ಮಾಡಲಿಲ್ಲ. ಇದರಿಂದಾಗಿ  ಕೋವಿಡ್ ಎರಡನೇ ಅಲೆಗೆ ಅತಿ ಹೆಚ್ಚು ಜನರು ಮರಣ ಹೊಂದಿದರು.ಎರಡು ಡೋಸ್ ಲಸಿಕೆ ಪಡೆದವರು ಮರಣ ಹೊಂದಿಲ್ಲ.ಮೂರನೇ ಅಲೆ ಬರುವ ಸೂಚನೆ ತಜ್ಞರು ವ್ಯಕ್ತಪಡಿಸುತ್ತಿದ್ದು.ಮುನ್ನೆಚ್ಚರಿಕೆ ಕ್ರಮವಾಗಿ 15 ರಿಂದ 18 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುತ್ತಿದ್ದು ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಯ್ಯನಗೌಡ ಮಾತನಾಡಿ, 15 ರಿಂದ 18 ರ ವಯಸ್ಸಿನ ಮಕ್ಕಳಿಗೆ ಕೋ-ವ್ಯಾಕ್ಸಿನ್ ನೀಡುತ್ತಿದ್ದು. ಮಕ್ಕಳು ಚೆನ್ನಾಗಿ ಊಟ ಮಾಡಿರಬೇಕು. ಲಸಿಕೆ ಪಡೆದು  ಅರ್ಧ ಗಂಟೆ ಕಾಲ ವಿಶ್ರಾಂತಿ ಮಾಡಬೇಕು. ವೈದ್ಯಕೀಯ ಸಿಬ್ಬಂದಿ ಶಿಕ್ಷಕರು ಸೇರಿದಂತೆ ಇತರೆ ಅಧಿಕಾರಿಗಳು ನಿಮ್ಮ ಜೊತೆ ಇರುತ್ತಾರೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ತಾಲೂಕು ದಂಡಾಧಿಕಾರಿ‌ ಮಂಜುನಾಥ ಭೋಗವತಿ ಮಾತನಾಡಿ, ಪ್ರೌಢಶಾಲೆಯ ಸರಕಾರಿ ಮತ್ತು ಖಾಸಗಿಯ ಶಿಕ್ಷಕರು,  ಪದವಿ ಪೂರ್ವ ಸರಕಾರಿ ಹಾಗೂ ಖಾಸಗಿಯ ಉಪನ್ಯಾಸಕರು, 15 ರಿಂದ 18‌ ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಲು ಸಕ್ರಿಯವಾಗಿ ಮುಂದಾಗಿ ಸರಕಾರ ಹಮ್ಮಿಕೊಂಡಿರುವ ಕೋವಿಡ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ,

ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಗ್ರಾ.ಪಂ.ಅಧ್ಯಕ್ಷೆ ರೇಣುಕಾ,ವೈದ್ಯಾಧಿಕಾರಿ ನಾಗರಾಜ ,

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ,ಕೃಷ್ಣಪ್ಪ ವೈ,   ವಾಸು, ಚಂದ್ರು, ಪ್ರದೀಪಕುಮಾರ, ಸುನೀಲ್, ಶಿಕ್ಷಕರಾದ ರೇಖಾ,ಬಸವರಾಜ್,ಅಮರೇಶ್,ಗುರುರಾಜ, ರವಿ ಪವರ್, ಶಿವಕುಮಾರ್, ಹುಲುಗಪ್ಪ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

 

Share and Enjoy !

Shares