ವಿಜಯನಗರಜಿಲ್ಲೆ
ಹೊಸಪೇಟೆ: ಒಂದೇ ಶಾಲೆಯ ಒಬ್ಬ ಶಿಕ್ಷಕಿ ಸೇರಿ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಧೃಡವಾಗಿರುವ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ( ಶಾಲಾ ವಿಭಾಗ) ದ ವಿದ್ಯಾರ್ಥಿಗಳಿಗೆ ಕೊರೊನಾ ಧೃಡವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಒಂದೇ ಶಾಲೆಯ ಒಬ್ಬ ಶಿಕ್ಷಕಿ ಸೇರಿ 13 ವಿದ್ಯಾರ್ಥಿಗಳಿಗೆ ಪಾಸಿಟಿವ್ ಧೃಡವಾಗಿರುವ ಘಟನೆ ನಡೆದಿದೆ.
ಈಗಲೇ ಶಾಲೆ ಸೀಲ್ಡೌನ್ ಮಾಡಲಾಗಿದ್ದು
ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು, ಇನ್ನೂ ಉಳಿದ ಕಮಲಾಪುರ ಸುತ್ತಮುತ್ತಲಿನ ವಿದ್ಯಾರ್ಥಿಗಳಾಗಿದ್ದಾರೆ. 47 ಜನರಿಗೆ ನಿನ್ನೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿದೆ. ಅದರಲ್ಲಿ 13 ವಿದ್ಯಾರ್ಥಿಗಳು, ಒಬ್ಬ ಶಿಕ್ಷಕಿಗೆ ಕೊರೊನಾ ಧೃಡವಾಗಿದೆ.
ಒಟ್ಟು 16 ಜನರಿಗೆ ಕೊರೊನಾ ಬಂದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಶಾಲೆಗೆ ಭೇಟಿ,ನಿಡಿ ಪರಿಶೀಲನೆ ನಡೆಸಿದರು.