2021-2022ನೇ ಸಾಲಿನಲ್ಲಿಯೂ ಸಹ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿ, ಮೊದಲನೇ ಆದ್ಯತೆ ನೀಡಿ : ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ

Share and Enjoy !

Shares
Listen to this article

2020 – 2021ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದವರಿಗೆ, 2021-2022ನೇ ಸಾಲಿನಲ್ಲಿ ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದ ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನಾಗಿ ಈ ವರ್ಷವು ಸಹ ನೇಮಕ ಮಾಡಿಬೇಕು ಎಂದು ಅಪರ ಜಿಲ್ಲಾಧಿಕಾರಿ ಮತ್ತು ಸರ್ಕಾರಿ‌ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ವಿಜಯನಗರ ಜಿಲ್ಲಾ ಅತಿಥಿ ಉಪನ್ಯಾಸಕರು ಹೋರಾಟ ಸಮಿತಿ ಅತಿಥಿ ಉಪನ್ಯಾಸಕರು ಮನವಿಪತ್ರ ಸಲ್ಲಿಸಿದರು.
ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬು ಅವರಿಗೆ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಬಿ.ಜಿ ಕನಕೇಶಮೂರ್ತಿ ಅವರಿಗೆ ಶುಕ್ರವಾರದೊಂದು ವಿಜಯನಗರ ಜಿಲ್ಲೆಯ ಅತಿಥಿ ಉಪನ್ಯಾಸಕ ಹೋರಾಟ ಸಮಿತಿಯೂ ಹೊಸದಾಗ ಅತಿಥಿ ಉಪನ್ಯಾಸಕ ನೇಮಕಾತಿ ಮಾಡಿಕೊಳ್ಳಿತ್ತಿರುವುದರಿಂದಾಗಿ ಈ ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದವರಿಗೆ ಮೊದಲೇ ಆದ್ಯತೆ ಮತ್ತು ಅದೇ ಕಾಲೇಜಿಗೆ ನೇಮಕ ಮಾಡಬೇಕೆಂದು ಮನವಿ ಸಲ್ಲಿಸಿದರು.

2020 – 2021ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದವರಿಗೆ 2021-2022ನೇ ಸಾಲಿನಲ್ಲಿ ಈ ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿದ ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನಾಗಿ ಈ ವರ್ಷವು ಸಹ ನೇಮಕ ಮಾಡಿಬೇಕು, ಅವರಿಗೆ ಮೊದಲನೇ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮತ್ತು ಶ್ರೀ ಶಂಕರ್ ಆನಂದ ಸಿಂಗ್
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಅಕ್ಕಿ ಮಲ್ಲಿಕಾರ್ಜುನ, ಡಾ. ತಿಪ್ಪೇಸ್ವಾಮಿ, ಡಾ.ಸತೀಶ್, ಡಾ.ಉಜ್ಜಪ್ಪ, ಡಾ.ಷಣ್ಮುಖಪ್ಪ, ವಾಸುದೇವ್, ಗಿರೀಶ್ ಕುಮಾರ್ ಗೌಡ, ಜಯಣ್ಣ, ಸುಪ್ರಿಯ, ಒಬಮ್ಮ, ಅನುಷಾ, ಚೇತನ, ಶಿಲ್ಪಾ, ರೇಣುಕಾ ಹಾಜರಿದ್ದರು. ‌

Share and Enjoy !

Shares