ಮಸ್ಕಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ತಾಲೂಕು ಘಟಕ ,ಮಸ್ಕಿ ಪಟ್ಟಣದ ಕೇಂದ್ರ ಶಾಲೆಯಲ್ಲಿ ವೈಜ್ಞಾನಿಕ ಚಿಂತಕ ,ವಿಚಾರವಾದಿ ,ಲೇಖಕ ,ಪವಾಡ ಬಯಲು ತಜ್ಞ ಎಚ್ ನರಸಿಂಹಯ್ಯನವರ 17ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು.
ಈ ಪುಣ್ಯಸ್ಮರಣ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ನಿರ್ದೇಶಕಿಯಾದ ಶ್ರೀಮತಿ ಅಶ್ವಿನಿ ಮೇಡಂ ರವರು ವೈಜ್ಞಾನಿಕ ಚಿಂತಕ ,ವಿಚಾರವಾದಿ ನರಸಿಂಹಯ್ಯನವರ ಬಾಲ್ಯ,ಶಿಕ್ಷಣ ಮತ್ತುಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಇತ್ಯಾದಿಗಳ ಬಗ್ಗೆ ತಿಳಿಸಿದರು. ನಂತರ ಮಸ್ಕಿ ಘಟಕದ ಅಧ್ಯಕ್ಷರಾದ ಶ್ರೀಮತಿ ಶಬಾನಾ ಮೇಡಂ ರವರು ಪರಿಷತ್ತಿನ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ, ಘಟಕದ ಖಜಾಂಚಿ ಯಾದ ಶ್ರೀ ಜಗದೀಶ್ ರವರು ನಿರೂಪಣೆ ಮಾಡಿದರು. ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ನಿರ್ದೇಶಕರಾದ ಶ್ರೀಮತಿ ಚೆನ್ನಮ್ಮ ಮೇಡಂ ಭಾಗವಹಿಸಿದ್ದರು ಮತ್ತು ಇತರೆ ಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ಮೇಡಂ ,ಶ್ರೀಮತಿ ನಿರ್ಮಲ ಮೇಡಂ ,ವೀಣಾ ಮೇಡಂ ,ಮಂಜುಳಾ ,ಬನಶ್ರೀ ,ಶೈಲಜಾ ಮತ್ತು ಹಿರಿಯ ಶಿಕ್ಷಕರಾದ ಭೀಮಪ್ಪ ಎನ್ ಬೆಲ್ಲದ ಸರ್, ಮಾಂತೇಶ್ ಸರ್, ಯಮನೂರಪ್ಪ ಗಾಲ್ಗಿನ್ ಭಾಗವಹಿಸಿದ್ದರು.