ವಿಜಯನಗರ ವಾಣಿ ಸುದ್ದಿ :ಕೊಪ್ಪಳ ಜಿಲ್ಲೆ
ಕಾರಟಗಿ:ಸಮೀಪದ ದೇವಿ ಕ್ಯಾಂಪ್ ನ ಗುಡ್ಡದಲ್ಲಿ ಅಕ್ರಮ ಮರಮ್ ಗಣಿಗಾರಿಕೆ, ನಿರಂತರವಾಗಿ ನಡಿತಾನೆಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಯಾವದೆ ಕ್ರಮ ವಹಿಸದೆ ಇರೊದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾರಟಗಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 23ನೇ ವಾರ್ಡ್ ದೇವಿಕ್ಯಾಂಪ್ ನ ಸರ್ವೆ ನಂಬರ್ 160 ರಲ್ಲಿ ಬರುವಂತಹ,
ದೇವಿ ಗುಡ್ಡ ಎಂದು ಪ್ರಸಿದ್ಧಿಯಾಗಿರುವ ಗೋಮಾಳ 120.ಎಕರೆ ಪ್ರದೇಶದಿಂದ ಕೂಡಿಕೊಂಡಿದೆ.
ಗೋಮಾಳ ಬೆಟ್ಟಕ್ಕೆ ಈ ಗ್ರಾಮ ಹೊಂದಿಕೊಂಡಿದ್ದು. ಗೋಮಾಳ ಪ್ರದೇಶದಿಂದ ಕೂಡಿಕೊಂಡಿರುವ ಈ ದೇವಿ ಗುಡ್ಡ ಪ್ರೇಕ್ಷಣೀಯ ಸ್ಥಳವಾಗಿದೆ, ಸುಮಾರು ವರ್ಷಗಳಿಂದ ಈ ದೇವಿ ಬೆಟ್ಟದಲ್ಲಿ
ಮರಮ್ ಗಣಿಗಾರಿಕೆ ನಡೆಯುತ್ತಿದ್ದು ಜೆಸಿಬಿಗಳ ಮೂಲಕ ಗುಡ್ಡವನ್ನು ಅಗೆದು ಇಲ್ಲಿನ ಮಣ್ಣನ್ನು ಕಾರಟಗಿ ಸೇರಿದಂತೆ ಹಲವೆಡೆ ಮಾರಾಟ ಮಾಡುವುದರ ಜೊತೆಗೆ ಸರ್ಕಾರಿ ಕಾಮಗಾರಿಗಳಿಗೆ ಕೂಡ ಇಲ್ಲಿನಮಣ್ಣನ್ನು ಬಳಸಲಾಗುತ್ತಿದೆಯಾದರು ಸಂಬಂದ್ದ ಪಟ್ಟ ಯಾವೊಬ್ಬ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಇದು ಮಾತ್ರ ಹೆಸರಿಗೆ ಗೋಮಾಳ ವಾಗಿದ್ದು ಇಲ್ಲಿ ಸುಮಾರು ವರ್ಷಗಳಿಂದ ಮರಮ್ ಗಳ್ಳರು ರಾಜಾರೋಷವಾಗಿ ಹಗಲು-ರಾತ್ರಿಯೆನ್ನದೆ ಸರ್ಕಾರಿ ವ್ಯಾಪ್ತಿಯಲ್ಲಿರುವ ಈ ಗುಡ್ಡದ ಮಣ್ಣನ್ನು ಅಗೆಯುತ್ತಾರೆ.
ಸರ್ಕಾರದ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಮಣ್ಣನ್ನು ಅಗೆದು ಹಾಡಹಗಲೇ ರಾಜಾರೋಷವಾಗಿ ಬೇರೆಡೆ ಸಾಗಿಸುತ್ತಾರೆ.
ಅಧಿಕಾರಿಗಳು ಮಾತ್ರ ತಮಗೇನು ಸಂಬಂದ ವಿಲ್ಲದಂತೆ ಇರೊದು ಮಾತ್ರ ಹಲವು ಅನುಮಾನ ಗಳಿಗೆ ಕಾರಣ ವಾಗಿದೆ.
ಸುಮಾರು ಕೋಟಿಗೂ ಅಧಿಕ ವಾಗಿ ಈ ಗುಡ್ಡದ ಮಣ್ಣನ್ನು ಅಗೆದು ಸಾಗಿಸಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಕೂಲಂಕುಷವಾಗಿ ಸ್ಥಳ ಪರಿಶೀಲನೆ
ನಡೆಸುವ ಮೂಲಕ ತಪ್ಪಿತಸ್ಥರ ಮೇಲೆ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಸರ್ಕಾರಿ ಕಂದಾಯ ಇಲಾಖೆ,
ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಹಾಗೂ ಜಿಲ್ಲಾಡಳಿತದ ಪೂರ್ವಾನುಮತಿ ಪಡೆಯದೆ ಗುಡ್ಡ ಅಗೆದು ಮಣ್ಣು ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ತಾರ ಕಾದು ನೊಡಬೇಕಿದೆ.
ಈ ಕೂಡಲೇ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಕಾರಟಗಿ ಈ ಗುಡ್ಡದ ರಕ್ಷಣೆಗೆ ಮುಂದಾಗಬೇಕು
ಈ ಅಕ್ರಮ ಮರಮ್ ಮಾರಾಟಗಾರರ ಜಾಲದ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಅಕ್ರಮ ಮರಮ್ ಸಾಗಣಿಕೆ ಕಡಿವಾಣ ಹಾಕಬೇಕು.
ಇಲ್ಲವಾದಲ್ಲಿ ಮುಂದಿನ ದಿನ ಮಾನಗಳಲ್ಲಿ ದೇವಿ ಗುಡ್ಡ ನೆಲಸಮವಾಗಿ ಕುರುಹು ಸಹಿತ ಇಲ್ಲದಂತಾಗುತ್ತದೆ ಎನ್ನುವುದು ಸಾರ್ಚಜನಿಕರ ಆರೋಪವಾಗಿದೆ.