ಚಂದನವನದ ಹೊಸ ಕೋಲ್ಮಿಂಚು ಸುಶ್ಮಿತಾ ಊರ್ವಿ

Share and Enjoy !

Shares
Listen to this article

ಕನ್ನಡ ಚಿತ್ರ ರಂಗ ಸದಾ ನೈಜ ಪ್ರತಿಭೆಗಳನ್ನು ಕೈಬೀಸಿ ಕರೆಯುತ್ತದೆ ,ಬೆಳೆಸುತ್ತದೆ ,ನೈಜವಾಗೇ ಉಳಿದರೆ ಉಳಿಸುತ್ತದೆ ಕೂಡ , ತನ್ನ ಅಮೋಘ ಪ್ರತಿಭಾ ಕೌಶಲ್ಯತೆಯಿಂದ ಅನೇಕ ನಟ ನಟಿಯರು ಇಲಿ ನೆಲೆ ಕಟ್ಟಿಕೊಂಡು ಬೆಳೆದಿದ್ದಾರೆ ,ಇವಾಗ ಈ ಸಾಲಿಗೆ ಸೇರಲು ತಯಾರಾಗಿದ್ದಾರೆ ಮಂಗಳೂರ್ ಬೆಡಗಿ ಸುಶ್ಮಿತಾ ಊರ್ವಿ ,ತನ್ನ ಸೌಂದರ್ಯ ಹಾಗು ನೈಜ ಅಭಿನಯದ ಮೂಲಕ ಕನ್ನಡಿಗರ ಮನಗೆಲ್ಲಲು ಹಂಬಲಿಸುತ್ತಿರುವ ಈ ಮುದ್ದು ಮುಖದ ನಟಿ ಸದ್ಯ ಆರ್ಯನ್ ,ಸ್ವರ್ಗಂ ಹಾಗು ಅರ್ಥಂ ಎಂಬ ನವ ಚಿತ್ರಗಳಲ್ಲಿ ನಟಿಸುತ್ತಿದಾರೆ ಹಾಗು ಇನ್ನು ಹೆಸರು ಇಡದ ೭ ಕ್ಕೂ ಅಧಿಕ ಚಿತ್ರಗಳಿಗೆ ಸಹಿ ಹಾಕುವ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆವೂರುವ ಖಚಿತ ಸಂದೇಶ ನೀಡಿದ್ದಾರೆ ,ನಟನಾ ಶಕ್ತಿ ಹಾಗು ಚಿತ್ರರಂಗದಲ್ಲಿ ಏನಾದ್ರು ಸಾದಿಸುವ ಸ್ಪಷ್ಟ ಗುರಿ ಹೊಂದಿರುವ ಈ ಬೆಡಗಿ ಹರಳು ಹುರಿದಂತೆ ಮಾತಾಡಿ ಎಲ್ಲರ ಮನಗೆಲ್ಲುದರಲ್ಲಿ ಯಶಸ್ವಿ ಆಗಿದ್ದರೆ ,ಮಂಗಳೂರಿನಲ್ಲಿ ಜನಿಸಿದ ಸುಶ್ಮಿತಾ ಉರ್ವಿ ಮಂಗಳೂರಿನ ಕೆ ಪಿ ಟಿ ವಿದ್ಯಾಲಯ ದಲ್ಲಿ ರಾಸಾಯನಿಕ ಶಾಸ್ತ್ರದ್ಲಲಿ ಡಿಪ್ಲೋಮ ಮಾಡಿದ್ದು ಸದ್ಯಕ್ಕೆ ಚಿತ್ರರಂಗದಲ್ಲಿ ಬಿಡುವಿಲ್ಲದ ತಾರೆಯಾಗಿದ್ದರೆ , ತನ್ನ ಎಲ್ಲಾ ಸಾಧನೆಗೆ ಹೆತ್ತವರ ನಿರಂತರ ಪರಿಶ್ರಮ ಸ್ಮರಿಸುವ ಈ ಬೆಡಗಿ ಸದಾ ಅವರಿಗೆ ಋಣಿಯಾಗಿದ್ದಾರೆ ಹಾಗು ಚಿತ್ರರಂಗದಲ್ಲಿ ಸಾದಿಸಿ ತೋರಲು ಹಂಬಲಿಸುತಿದ್ದಾರೆ ,ವಿಭಿನ್ನ ಪಾತ್ರಗಳು ಹಾಗು ಜನರ ಮನಸು ಮುಟ್ಟುವ ಪಾತ್ರಗಳನ್ನು ಹೆಚ್ಚಾಗಿ ಅಭಿನಹಿಸಲು ಇಷ್ಟ ಪಡುವ ಊರ್ವಿ ಕನ್ನಡಿಗರ ಮನ ಗೆಲ್ಲಲು ತಯಾರಾಗಿದ್ದಾರೆ , ಇವರ ಎಲ್ಲ ಚಿತ್ರಗಳು ಯಶಸ್ವೀ ಆಗಲಿ ಕನ್ನಡ ಚಿತ್ರರಂಗದಲ್ಲಿ ಈ ಇನ್ನೊಂದ್ ಅಚ್ಚ ಕನ್ನಡಿಗ ಪ್ರತಿಭೆ ಬೆಳೆಯಲಿ ಹೊಳೆಯಲಿ ಎಂದು ನಮ್ಮ ಆಶಯ ,

Share and Enjoy !

Shares