ಕ್ರೀಡಾ ಚಟುವಟಿಕೆಯಿಂದ ಆತ್ಮವಿಶ್ವಾಸ ವೃದ್ಧಿ -ಮುಖ್ಯಗುರು ಗಂಗಾಧರ.ಪೈ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚಿನ ಗಮನ ನೀಡಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು, ಸಚಿನ್ ,ಧೋನಿ,ದ್ಯಾನ್ ಚಂದ್ ,ಪಿ.ಟಿ.ಉಷಾ ಅಭಿನವ್ ಬಿಂದ್ರಾ,ರವರಂತೆ ಶಾಶ್ವತ ಹೆಸರು ಗಳಿಸಬಹುದು. ಎಂದು ಬಿ.ಎಮ್ ಕುಮಾರಸ್ವಾಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಜಡಿಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಬಿ.ಎಂ ಕುಮಾರ ಸ್ವಾಮಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗಾಗಿ ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಶಾಲೆಯ ಮುಖ್ಯಗುರು ಗಂಗಾಧರ ಪೈ ರವರು ಕ್ರೀಡೆಗಳಿಂದ ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಜೊತೆಗೆ ಆತ್ಮವಿಶ್ವಾಸ ಹೊಂದಲು ಸಹಕಾರಿಯಾಗಿದ್ದು ಮಕ್ಕಳಿಂದ ಮುದುಕರ ವರೆಗೂ ಪ್ರತಿಯೊಬ್ಬರಿಗೂ ಕ್ರೀಡಾ ಚಟುವಟಿಕೆ ಅತ್ಯಗತ್ಯ, ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಲು ನಾವು ಪ್ರತಿ ವರ್ಷ ಶಾಲಾ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಶಾಲೆಯ ಕ್ರೀಡಾ ಮಂತ್ರಿಯಾದ ಗೌರವ್ ಪೈ ಕ್ರೀಡಾ ಜ್ಯೋತಿ ಹಿಡಿದು ಪಥ ಸಂಚಲನದಲ್ಲಿ ಭಾಗವಹಿಸಿದರು.
1. ರಿಂದ 4 ನೇ ಮಕ್ಕಳಿಗೆ ಒಳಾಂಗಣ ಆಟಗಳನ್ನು ಆಡಿಸಲಾಯಿತು.ಇನ್ನೂ ಉಳಿದ. ಮಕ್ಕಳಿಗೆ ಕಬ್ಬಡ್ಡಿ,ವಾಲಿಬಾಲ್, ಖೋ,ಖೋ,ಶಾಟ್ ಪುಟ್,ಡಿಸ್ಕಸ್ ಥ್ರೋ,100,200,500 ಮೀಟರ್ ಓಟದ ಸ್ಪರ್ಧೆ , ಹಾಗೂ “ರಿಲೆ” ಸೇರಿದಂತೆ ನಾನಾ ಆಟಗಳನ್ನು ಆಡಿಸಲಾಯಿತು. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಮುಖ್ಯಗುರು ಗಂಗಾಧರ ಪೈ ಬಹುಮಾನ ನೀಡಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ದೀಪ.ಪೈ,ಮಿಸ್ ನಂದಿನಿ, ಚಂದ್ರಶೇಖರ ಆಚಾರ್ಯ, ದಯಾನಂದ ನಾಯ್ಕ್ ,ನಾಗರಾಜ್ ನಾಯ್ಕ್, ಮಾರುತೇಶ ನಾಯಕ ಹಾಗೂ ಇನ್ನಿತರ ಶಿಕ್ಷಕರು ಹಾಜರಿದ್ದರು

Share and Enjoy !

Shares