ವಿಜಯನಗರವಾಣಿ
ಸಿರುಗುಪ್ಪ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನಲೆಯಲ್ಲಿ ಇದುವರೆಗೂ ಕಾಲೇಜುಗಳು ಬಂದ್ ಆಗಿದ್ದವು
ಅನೇಕ ತಿರುವುಗಳು ಹಾಗೂ ಪರ ವಿರೋಧದ ಮಧ್ಯೆ ವಿವಾದವು ನ್ಯಾಯಾಲಯದ ಮೆಟ್ಟಿಲು ಏರಿತ್ತುವಿವಾದವು ಮಧ್ಯಂತರ ಆದೇಶ ನೀಡಿದ್ದು ಪೂರ್ಣಪ್ರಮಾಣದ ಆದೇಶ ಹೊರಬಿದ್ದಿಲ್ಲ ಕಾಲೇಜುಗಳ ಸಮವಸ್ತ್ರ ನೀತಿ ಸಂಹಿತೆಯಂತೆ ಬೋಧಕ ಕೊಠಡಿಗಳಲ್ಲಿ ಸಮವಸ್ತ್ರ ಇರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿರುವುದರಿಂದ ಎಂದಿನಂತೆ ಕಾಲೇಜುಗಳು ಪ್ರಾರಂಭಗೊಂಡವು.
ಸಿರುಗುಪ್ಪ ತಾಲ್ಲೂಕಿನ ಲ್ಲಿರುವ ಪ್ರಮುಖ ಕಾಲೇಜುಗಳಿಗೆ ಎಂದಿನಂತೆ ವಿದ್ಯಾರ್ಥಿನಿಯರು ಆಗಮಿಸಿದರು.
ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಯ ಬಳಿ ಬಂದಾಗ ಕಾಲೇಜು ಆಡಳಿತ ಮಂಡಳಿಗಳು ನ್ಯಾಯಾಲಯದ ಸೂಚನೆಯಂತೆ ಕಾಲೇಜಿನ ಒಳಗಡೆ ಬೋಧಕ ಕೊಠಡಿಗಳ ಪ್ರವೇಶಕ್ಕೂ ಮುನ್ನ ಹಿಜಬ್ ತೆಗೆಯಬೇಕೆಂದು ತಿಳಿಸಿದ್ದರಿಂದ ಹೊರಗಡೆಯೇ ಕೆಲಸಮಯ ವಿದ್ಯಾರ್ಥಿನಿಯರು ಕಾಯುವ ದೃಶ್ಯ ಕಂಡುಬಂದಿತು.
ಸ್ಥಳಕ್ಕೆ ತಹಸೀಲ್ದಾರ್ ಎನ್. ಆರ್. ಮಂಜುನಾಥಸ್ವಾಮಿ ಆಗಮಿಸಿ ಕಾಲೇಜು ಪ್ರಾಂಶುಪಾಲರೊಂದಿಗೆ ಮಾತನಾಡಿದರು. ವಸ್ತ್ರ ಬದಲಾವಣೆಗೆ ಪ್ರತ್ಯೇಕ ಕೊಠಡಿ ಏರ್ಪಾಡು ಮಾಡಿ ಎಂದು ಕಾಲೇಜು ಮಂಡಳಿಗೆ ತಿಳಿಸಿದರು .ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯ ಮತ್ತು ಕಾಲೇಜು ಆಡಳಿತ ಮಂಡಳಿಗಳು ತಿಳಿಸಿದಂತೆ ಹಿಜಾಬ್ ತೆಗೆದು ಬೋಧಕ ಕೊಠಡಿ ಪ್ರವೇಶಿಸಿದರು.
ಆದರೆ ಕೆಲವರು ಹಿಜಾಬ್ ತೆಗೆಯುವುದಿಲ್ಲ ಹಿಜಾಬ್ ಧರಿಸಿಕೊಂಡೇ ಬೋಧಕ ಕೊಠಡಿಗಳನ್ನು ಪ್ರವೇಶಿಸುತ್ತೇವೆ
ಎಂದ ಕಾರಣ ಕೆಲ ಸಮಯದವರೆಗೂ ಚರ್ಚೆ ಉಂಟಾಯಿತು.
ಕೊನೆಯದಾಗಿ ಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕೆಂದು ಕಾಲೇಜು ಆಡಳಿತ
ಮಂಡಳಿಯವರು ತಿಳಿದರು.
ಇದರ ಹೊರತಾಗಿ ಯಾವುದೇ ವಿವಾದಾತ್ಮಕ ಘಟನೆಗಳು ಸಂಭವಿಸಲಿಲ್ಲ ..
ಕಾಲೇಜು ಪುನಾರಂಭದ ದಿನವಾದ ಇಂದು ಬೆಳಗಿನಿಂದಲೇ ಸಿರುಗುಪ್ಪ ಪೊಲೀಸ್ ಠಾಣೆಯ ಅಧಿಕಾರಿ ಗಳಾದ ಸಿಪಿಐ ಯಶವಂತ ಬಿಸ್ನಳ್ಳಿ ಕಾ.ಸು. ವಿಭಾಗದ ಪಿಎಸ್ಸೈ ರಂಗಯ್ಯ ಕೆ. ಎಸೈ. ಪಂಪಾಪತಿ ಪೊಲೀಸ್ ಅಧಿಕಾರಿಗಳಾದ ಈಶ್ವರಪ್ಪ. ಮುನಿಸ್ವಾಮಿ ಶರಣಪ್ಪ ಸೇರಿದಂತೆ ಅನೇಕರು ಕಾಲೇಜುಗಳಿಗೆ ಸೂಕ್ತ ಬಂದೋಬಸ್ತು ನೀಡಿದ್ದರು.