ಮೇಕಿಂಗ್ ನಿಂದ ಸದ್ದು ಮಾಡುತ್ತಿರುವ ಭೈರವ ಸಿನಿಮಾ.

Share and Enjoy !

Shares
Listen to this article

ಭಾರತೀಯ ಸಿನಿ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಚಿತ್ರಗಳು ಸದ್ದು ಮಾಡುತ್ತಿರುವ ಸಂಧರ್ಭದಲ್ಲಿ ಪಿ.ಎನ್.ಸತ್ಯ ಅವರ ಗರಡಿಯಲ್ಲಿ ಪಳಗಿದ ರಾಮ್ ತೇಜ ಅವರ ನಿರ್ದೇಶನದ “ಭೈರವ” ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದ್ದು ದೂರದ ಉತ್ತರ ಪ್ರದೇಶದ ಮೋದಿ ನಗರ,ರಿಷಿಕೇಶ್ ನಲ್ಲಿ ಚಿತ್ರದ ಶೂಟಿಂಗ್ ಮುಗಿಸಿದ್ದು ಚಿತ್ರೀಕರಣದ ಕೆಲ ತುಣುಕುಗಳನ್ನ ಚಿತ್ರತಂಡ ಹೊರ ಬಿಟ್ಟಿದ್ದು ಎಲ್ಲೇಡೆ ಸದ್ದು ಮಾಡುತ್ತಿದೆ.

ಈ ಸಿನಿಮಾ ಸದ್ದು ಮಾಡಲು ಕಾರಣ ಸಿನಿಮಾ ಟೈಟಲ್ . ಭೈರವ ಶೀರ್ಷಿಕೆ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿದ್ದವಾಗುತ್ತಿದೆ.

ವಿಶೀಕ ಫಿಲ್ಮ್ ನ ಅಡಿಯಲ್ಲಿ ಮೂಡಿ ಬರುತ್ತಿರುವ ಭೈರವ ಸಿನಿಮಾಗೆ ಬಂಡವಾಳನ್ನ ಬಾಲಿಹುಡ್ ನ ಹನಿ ಚೌದರಿ , ಬಜಾಜ್ ವೈಬವ್, ಕನ್ನಡಿಗ ಸಿ.ವಿ. ಶ್ರೀನಿವಾಸ್ ಹಣ ಹಾಕಿದ್ದಾರೆ. ಚರಣ್ ಸುವರ್ಣ ಅವರ ಕಥೆ, ಕನ್ನಡ ಚಿತ್ರರಂದಗ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಅವರ ಗರಡಿಯಲ್ಲಿ ಪಳಗಿದ ಯುವ ನಿರ್ದೇಶಕ ರಾಮ್ ತೇಜ್ ಅವರ ರಚನೆ ನಿರ್ದೇಶನ ವಿದ್ದು ಕಪೀಲ್ ದೀಕ್ಷಿತ್ ಅವರ ಕಲಾತ್ಮಕ ನಿರ್ದೇಶನ, ಸುದೀಪ್ ಪೆಡ್ರೀಕ್ ಅವರ ಛಾಯಾಗ್ರಹಣ,ಕೆ.ಆರ್. ಲಿಂಗರಾಜು ಅವರ ಸಂಕಲನ, ಈ ಚಿತ್ರಕ್ಕೆ ವಿಶ್ವಜೀತ್ ಮತ್ತು ಕಿಶೋರ್ ಕುಮಾರ್ ಅವರು ಸಂಗೀತ ವನ್ನು ನೀಡಿದ್ದು ,ಬಾಪಿ ಟುಟಲ್ ಅವರ ಹಿನ್ನಲೆ ಸಂಗೀತ, ಸಾಹಿ ಸರ್ವೇಶ್ ಅವರ ಸಾಹಿತ್ಯ ,ಧನುಂಜಯ್ ಅವರ ನೃತ್ಯ ನಿರ್ದೇಶನವಿದೆ.ಸಹ ನಿರ್ದೇಶಕ ರಾಗಿ ಶಿವು ಬಳ್ಳಾರಿ, ಸ್ಚಿತಿಕ ಚರಣ್, ಕಾರ್ಯನಿರ್ವಹಿಸುತ್ತಿದ್ದಾರೆ.

ಚಿತ್ರದ ನಾಯಕ-ನಾಯಕಿಯಾಗಿ ಸನತ್, ಶೈಲಶ್ರೀ ಅಭಿನಯಿಸಲಿದ್ದು ಉಮೇಶ್ ಸಕ್ಕರೆ ನಾಡು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈಗಾಗಲೇ ಭೈರವ ಚಿತ್ರೀಕರಣವು ಉತ್ತರ ಪ್ರದೇಶದ ಗಾಂಧಿನಗರ,ರಿಷಿಕೇಶ್,ಮೀರತ್,ಗಾಜಿಯಾಬಾದ್,ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಿದ್ದು ಉಳಿದ ಭಾಗವನ್ನ ಮೈಸೂರು, ಬೆಂಗಳೂರಿನ ಲ್ಲಿ ಸಹ ಕೆಲವು ದಿನಗಳ ಕಾಲ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ದೇಶಕ ರಾಮ್ ತೇಜ ಅವರು ತಿಳಿಸಿದ್ದಾರೆ.

ಭೈರವ ಸಿನಿಮಾ ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಎಷ್ಟು ಸದ್ದು ಮಾಡುತ್ತಾನೆ ಎನ್ನುವುದು ಕಾದು ನೋಡ ಬೇಕಾಗಿದೆ.

Share and Enjoy !

Shares