ವಿಜಯನಗರವಾಣಿ
ಕಂಪ್ಲಿ: ಪಟ್ಟಣದ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಮೇಲೆ ಇಂದು ದಾಳಿ ಮಾಡಿದ ಬಳ್ಳಾರಿ ಎಸಿಬಿ.
ಇಲ್ಲಿನ ಠಾಣೆಯ ಕ್ರೈಂ ಪಿಎಸ್ಐ ಬಸಪ್ಪ ಲಮಾಣಿ ಅವರು ಕಛೇರಿಯಲ್ಲಿ 5 ಸಾವಿರ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ದೂರಿದಾರನೊಂದಿಗೆ ಬಂದ ಬಳ್ಳಾರಿ ಎಸಿಬಿ ಅಧಿಕಾರಿಗಳ ತಂಡ ಲಂಚದ ರೂಪದಲ್ಲಿ ಹಣ ಪಡೆಯುತ್ತಿದ್ದ ಅಪಾರ ವಿಭಾಗದ ಪಿಎಸ್ಐ ಬಸಪ್ಪ ಲಮಾಣಿ ಮೇಲೆ ಏಕಾಏಕಿ ದಾಳಿ ಮಾಡಿ, ಹಣ ಸಮೇತ ಕ್ರೈಂ ಪಿಎಸ್ಐ ಬಸಪ್ಪ ಲಮಾಣಿಯನ್ನು ವಶಕ್ಕೆ ಪಡೆದಿದ್ದಾರೆ.
ಕಂಪ್ಲಿ ನಿವಾಸಿ ಎಂ.ನಾರಾಯಣಸ್ವಾಮಿ ಎನ್ನುವವರಿಗೆ ಕಳೆದ 2-3 ತಿಂಗಳಿಂದ ದೀಪಾವಳಿ ನಿಮಿತ್ಯ ಹತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಅವರಿಗೆ ಸಕಾಲದಲ್ಲಿ ಹಣ ಕೊಡದೇ, ಆಗದೇ ಇದ್ದಾಗ ವ್ಯಕ್ತಿಗೆ ಪಿಎಸ್ಐ ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಿನ್ನ ದ್ವಿಚಕ್ರ ವಾಹನವನ್ನು ಸೀಜ್ ಮಾಡುವ ಬೆದರಿಕೆ ಹಾಕಿದ್ದ. ಈ ಬೆದರಿಕೆ ಹಿನ್ನಲೆ ಎಂ.ನಾರಾಯಣಸ್ವಾಮಿ ಅವರು ಎಸಿಬಿ ಅವರಿಗೆ ಕಳೆದ ದಿನದಂದು(ಮಾ.7) ದೂರು ನೀಡಿದ್ದು, ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಕಂಪ್ಲಿ ಠಾಣೆಗೆ ಬಂದ ಎಂ.ನಾರಾಯಣಸ್ವಾಮಿ ಅವರಿಂದ ಅಪರಾಧ ಪಿಎಸ್ಐ ಬಸಪ್ಪ ಲಮಾಣಿ ಅವರು ಐದು ಸಾವಿರ ಲಂಚದ ಹಣ ಪಡೆಯುತ್ತಿರುವಾಗ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಲಂಚದ ಹಣ ಸಮೇತ ಪಿಎಸ್ಐನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಬಳ್ಳಾರಿ ವಲಯದ ಎಸ್ಪಿ ಶ್ರೀ ಹರಿಬಾಬು, ಡಿವೈಎಸ್ಪಿ ವಿ.ಸೂರ್ಯನಾರಾಯಣರಾವ್, ಪಿಐಗಳಾದ ಪ್ರಭುಲಿಂಗಯ್ಯ ಹಿರೇಮಠ, ಸುಂದರೇಶ್ ಹೊಳೆಣ್ಣನವರ್, ಹೆಚ್ಸಿಗಳಾದ ಸತೀಶ್, ವಸಂತಕುಮಾರ್, ಪಿಸಿಗಳಾದ ದೀವಾಕರ್, ಯುವರಾಜ್ ಸಿಂಗ್, ಪ್ರಕಾಶ್, ಕೊಪ್ಪಳ ಎಸಿಬಿಯ ಸಿಬ್ಬಂದಿಗಳಾದ ಉಮೇಶ್, ಜಗದೀಶ್ ಇದ್ದರು