ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಡೆಸಲು, ಬಹಿಷ್ಕಾರ ಹಾಕಿರುವುದು ಖಂಡಾನರ್ಹ : ಎಂ.ಗಂಗಾಧರ

Share and Enjoy !

Shares
Listen to this article

 

ದಲಿತ,ಅಲ್ಪಸಂಖ್ಯಾತ,ಶೋಷಿತ ಸಮುದಾಯಗಳ ಒಕ್ಕೂಟದಿಂದ ಏಪ್ರೀಲ್‌ನಲ್ಲಿ ಬಹುತ್ವ ಭಾರತ ಭಾವೈಕ್ಯತಾ ಬೃಹತ್ ಸಮಾವೇಶ.

 

ವಿಜಯನಗರವಾಣಿ ಸುದ್ದಿ

ಸಿಂಧನೂರು : ರಾಜ್ಯದ ಕೆಲವೆಡೆ ಮುಸ್ಲಿಂ ಸಮುದಾಯದ ಬಡ ವ್ಯಾಪಾರಸ್ಥರಿಗೆ ಜಾತ್ರೆ, ಉತ್ಸವಗಳಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಬಹಿಷ್ಕಾರ ಹಾಕಿರುವುದರ ಹಿಂದೆ ಬಿಜೆಪಿಯ ಹಾಗೂ ಅದರ ಸಂಘಪರಿವಾರದ ನೇರ ಕೈವಾಡವಿದ್ದು ಇದನ್ನು ನಮ್ಮ ಒಕ್ಕೂಟವು ಉಗ್ರವಾಗಿ ಖಂಡಿಸುತ್ತದೆ. ಹಾಗೆಯೇ ಅಷ್ಯಪ್ರೃಷ್ಯತೆಯ ಇನ್ನೊಂದು ಕರಾಳ ಮುಖದ ಹಿಂದೂತ್ವವಾದಿ ಧೋರಣೆಗೆ ತೀವ್ರ ವಿರೋಧವಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಒಕ್ಕೂಟದಿಂದ ಏಪ್ರೀಲ್ ತಿಂಗಳಿನಲ್ಲಿ “ಬಹುತ್ವ ಭಾರತ ಭಾವೈಕ್ಯತಾ ಬೃಹತ್ ಸಮಾವೇಶವನ್ನು ನಡೆಸಲಾಗುವುದೆಂದು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಎಂ.ಗAಗಾಧರ ತಿಳಿಸಿದರು.  

 

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಶನಿವಾರದಂದು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಿದು. ಇಂತಹ ಜ್ಯಾತ್ಯಾತೀತ ತೋಟದಲ್ಲಿ ಮುಳ್ಳು ಗಿಡಗಳಾಗಿ, ಕೋಮುವಾದಿಗಳಾಗಿ ಅರಳುವುದನ್ನು ಸಹಿಸಲಾರೆವು. ಹಿಂದೂ-ಮುಸ್ಲಿA, ಬಿಜೆಪಿ-ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್-ಆರೆಸ್ಸೆಸ್ಸ್, ದಲಿತರು-ಬ್ರಾಹ್ಮಣರು, ಬಸವತತ್ವ-ಮನುವಾದ, ಕೇಸರಿ ಶ್ಯಾಲು-ರಾಷ್ಟ್ರಧ್ವಜ, ಸಂವಿಧಾನ-ಭಗವದ್ಗೀತೆ, ರಾಷ್ಟ್ರೀಯ ಏಕತೆ-ಧಾರ್ಮಿಕ ಸ್ವಾತಂತ್ರ‍್ಯ ಸೇರಿದಂತೆ ಹೀಗೆ ಅನೇಕ ವಿಷಯಗಳಲ್ಲಿ ಭಿನ್ನಭಿಪ್ರಾಯಗಳು ಭುಗಿಲೆದ್ದಿವೆ ಅಥವಾ ಮಾದ್ಯಮಗಳು ಇದನ್ನು ಭುಗಿಲೇಳುವಂತೆ ಮಾಡಿವೆ. ಹಿಂದೂ – ಮುಸ್ಲಿಂ – ಬೇಡ ಬೇಡ ! ಭಾರತೀಯತೆ ಬೇಕೇ ಬೇಕು ! ಮಾನವೀಯತೆ ಬೇಕೇ ಬೇಕು ಎಂಬAತಹ ವಿಚಾರಧಾರೆಗಳನ್ನು ಸಮಾಜದಲ್ಲಿ ಹರಡಬೇಕಾಗಿದೆ. ಆದರೆ, ಕೆಲವು ಮೂಲಭೂತವಾದಿ ಸಂಘಟನೆಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ.       

 

ಈ ದೇಶದ ಪ್ರತಿಯೊಬ್ಬರ ನಿಷ್ಠೆ ಸಂವಿಧಾನದ ಕಡೆಗಿರಲಿ. ಸಾಮಾನ್ಯ ಜನರೇ ಗಲಭೆಗಳು ಪ್ರಾರಂಭವಾಗುವಾಗ ನಾವು ಮಾತನಾಡದೆ ಮೌನವಾಗಿದ್ದರೆ ಅದು ನಮ್ಮನ್ನೂ ಆಹುತಿ ತೆಗೆದುಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬ ನಾಗರೀಕರು ಇದರ ವಿರುದ್ಧ ಧ್ವನಿ ಎತ್ತಬೇಕು. ಈ ಧಾರ್ಮಿಕ ಮೂಲಭೂತವಾದಿಗಳ ಅಜ್ಞಾನದಿಂದ ಭಾರತ ನರಳದಿರುವಂತೆ ಎಲ್ಲರೂ ಭಾವೈಕ್ಯದಿಂದ ಬದುಕನ್ನು ಕಟ್ಟಬೇಕಾಗಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮಾಚರಣೆಗೆ, ಕಾನೂನಾತ್ಮಕ ವ್ಯಾಪಾರ-ವಹಿವಾಟು ನಡೆಸುವುದಕ್ಕೆ, ಬದುಕನ್ನು ಕಟ್ಟಿಕೊಳ್ಳುವುದಕ್ಕೆ, ದುಡಿದು ತಿನ್ನುವುದಕ್ಕೆ ಹಕ್ಕಿದ್ದು, ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾದ್ಯ. ಈ ರೀತಿ ಮುಸ್ಲಿಂ ಸಮುದಾಯದವರನ್ನು ಬಹಿಷ್ಕರಿಸುವುದು ದೇಶದ ಅಭಿವೃದ್ಧಿಗೆ ಮಾರಕ. ಆಳುವಂತ ಸರಕಾರಗಳು ಬೆಲೆ ಏರಿಕೆ, ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು, ಜನ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ, ದಲಿತ ಅಲ್ಪಸಂಖ್ಯಾತ, ಹಿಂದುಳಿದ ಜನತೆಗೆ ಮಾರಕವಾಗುವಂತಹ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸುತ್ತಿರುವುದರಿಂದ ಯಾರು ಪ್ರಶ್ನೀಸಬಾರದೆಂದು ಬಿಜೆಪಿ ಮತ್ತು ಆರೆಸ್ಸೆಸ್ಸ್ ಅದರ ಅಂಗ ಸಂಸ್ಥೆಗಳಾದ, ಹಿಂದೂಪರ ಸಂಘಟನೆಗಳ ಮೂಲಕ ದೇಶದಲ್ಲಿ ಕೋಮು ಗಲಭೆಗೆ ಪ್ರಚೋಧಿಸುತ್ತ ದುಡಿದು ತಿನ್ನುವ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತ ಯುವಜನತೆಯಲ್ಲಿ ಮತೀಯವಾದದ ವಿಷಬೀಜ ಬಿತ್ತಲು ಹೋರಟಿದ್ದಾರೆ. 

ಅದಕ್ಕಾಗಿ ಏಪ್ರೀಲ್ ತಿಂಗಳಿನಲ್ಲಿ ದಲಿತ-ಹಿಂದುಳಿದ, ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಅಡಿಯಲ್ಲಿ ಹಾಗೂ ರೈತ-ಕಾರ್ಮಿಕ, ಮಹಿಳಾ, ವಿದ್ಯಾರ್ಥಿ-ಯುವಜನ ಚಳುವಳಿಗಳನ್ನು ಮುನ್ನಡೆಸುತ್ತಿರುವ ಪ್ರಮುಖರು ಮತ್ತು ಸರ್ವ ಸದಸ್ಯರ, ಜ್ಯಾತ್ಯಾತೀತ ಮುಖಂಡರನ್ನೊಳಗೊAಡು “ಬಹುತ್ವ ಭಾರತ ಭಾವೈಕ್ಯತಾ” ಹೆಸರಿನಲ್ಲಿ ಬೃಹತ್ ಸಮಾವೇಶವನ್ನು ಒಕ್ಕೂಟವು ಆಯೋಜನೆ ಮಾಡಲಿದ್ದೇವೆಂದು ತಿಳಿಸಿದರು. 

ನಂತರ ಇನ್ನೋರ್ವ ಒಕ್ಕೂಟದ ಸಂಚಾಲಕರಾದ, ಹನುಮಂತಪ್ಪ ಹಂಪನಾಳ ಮಾತನಾಡಿ ದೇಶದಲ್ಲಿ ನಿತ್ಯ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ,ಅತ್ಯಾಚಾರ, ಮುಸ್ಲಿಂ ಸಮುದಾಯಗಳನ್ನು ಬಹಿಷ್ಕರಿಸುವುದು ಬಿಜೆಪಿ ಪಕ್ಷದ ಅಜಂಡವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಒಕ್ಕೂಟವು ನಿರಂತರವಾಗಿ ಶ್ರಮಿಸುತ್ತ ಬಂದಿದ್ದು ಇದರ ಭಾಗವಾಗಿ ಎಲ್ಲಾ ಸಮುದಾಯಗಳನ್ನೊಳಗೊಂಡು ಏಪ್ರೀಲ್ ತಿಂಗಳಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ನಂತರ ಶಿವರಾಜ ಉಪ್ಪಲದೊಡ್ಡಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ದೌಲಸಾಬ ದೊಡ್ಡಮನಿ, ವಿಜಯಕುಮಾರ, ಯಂಕೋಬ ಬೆವಿನಗಿಡ, ಹುಸೇನಪ್ಪ ತೆಳಗಡೆಮನಿ, ಪರಶುರಾಮ ಮಾಬುಸಾಬ ಬೆಳ್ಳಟ್ಟಿ, ಸೈಯದ್ ಬಂದೇನವಾಜ್, ಹೆಚ್,ಆರ್.ಹೊಸಮನಿ, ಯಲ್ಲಪ್ಪ ಗೋಮರ್ಸಿ ಸೇರಿದಂತೆ ಇತರರು ಭಾಗವಹಿಸಿದ್ದರು.

Share and Enjoy !

Shares