ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಹಾ ಮಾನವತಾವದಿ, ವಿಶ್ವಗುರು ಜಗಜ್ಯೋತಿ ಶ್ರೀಬಸವೇಶ್ವರರ ೮೮೯ನೇ ಬಸವಜಯಂತೋತ್ಸವದ ಅಂಗವಾಗಿ ಶ್ರೀಬಸವೇಶ್ವರ ಭವ್ಯ ಭಾವಚಿತ್ರಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹಸಿರು ನಿಶಾನೆ ತೋರಿಸಿ ಮೆರವಣಿಗೆಗೆ ಚಾಳನೆ ನೀಡಿದರು.
ಶ್ರೀಬಸವೇಶ್ವರ ಭವ್ಯ ಭಾವ ಚಿತ್ರ ಮೆರವಣಿಗೆಯೊಂದಿಗೆ ಅನೇಕ ವಚನಕಾರರು, ಮಾನವತಾವದಿಗಳು, ಶರಣರು ಸಂತರು ಭಾವಚಿತ್ರ ಮೆರವಣಿಗೆಯಲ್ಲಿ ಆಕರ್ಷಣೆಯಾಗಿದ್ದವು.
ತಾಲೂಕು ಕ್ರೀಡಾಂಗಣ ದಿಂದ ತಹಶೀಲ್ದಾರ್ ಆವರಣದ ವೇದಿಕೆ ಕಾರ್ಯಕ್ರಮವರಿಗೆ ಮೆರವಣಿಗೆಯನ್ನು ನಡೆಸಿದರು.
ಗುರುಬಸವಮಠದ ಪೀಠಾಧಿಪತಿ ಬಸವಭೂಷಣ ಸ್ವಾಮಿಜೀ,
ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಂ.ಬಸಪ್ಪ, ಬಿಸಿಎಂ. ವಿಸ್ತಾರಣ ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಅಧಿಕಾರಿ ಎಂ.ಸಿದ್ದಯ್ಯ, ಪಶುಸಂಗೋಪನಾಧಿಕಾರಿ ಕೆ.ಗಂಗಾಧರ, ನಗರಸಭೆ ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಡಿ.ವೈ.ಎಸ್.ಪಿ. ಸತ್ಯನಾರಾಯಣ ಮೂರ್ತಿ, ಸಿ.ಪಿ.ಐ ಯಶವಂತ ಬಿಸನಳ್ಳಿ, ಜಿಲ್ಲಾ ಪಂಚಾಯಿತಿ ಇಂಜಿನಿಯರ ವೀರೇಶ ನಾಯಕ ಮುಖಂಡರಾದ ಬಳಿಗಾರ್, ದಮ್ಮೂರು ಸೋಮಪ್ಪ, ಪಂಪಾಪತಿ, ಟಿ.ಎಂ.ಶಿವಕುಮಾರ, ಚೆನ್ನಬಸವನಗೌಡ, ಬಸವಲಿಂಗಪ್ಪ, ಹೆಚ್.ಬಿ.ಗಂಗಪ್ಪ, ಕೊಡ್ಲೆ ಮಲ್ಲಿಕಾರ್ಜುನ ಇದ್ದರು.