ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಮೀಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಆಗಮಿಸಿದ ಮಾನ್ಯ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅವರಿಗೆ ಮುಸ್ಲಿಂ ಸಮುದಾಯದಿಂದ ಸನ್ಮಾನಿಸಲಾಯಿತು,
ಶಾಸಕರು ಮಾತನಾಡಿ ಒಂದು ತಿಂಗಳ ಕಾಲ ಎಲ್ಲ ಮುಸ್ಲಿಮರು ಸೇರಿ ಉಪವಾಸ ಮಾಡುವುದರ ಮೂಲಕ ಈ ಹಬ್ಬವನ್ನು ಆಚರಿಸಿದ್ದಿರಿ ಅದಕ್ಕಾಗಿ ನಮ್ಮ ದೇಶಕ್ಕೆ ಶಾಂತಿಯನ್ನು ಆ ದೇವರು ಕರುಣಿಸಲಿ ,
ನಮ್ಮ ತಾಲೂಕಿನಲ್ಲಿ ನಾವೆಲ್ಲರೂ ಅಂದರೆ ಹಿಂದೂ-ಮುಸ್ಲಿಂ ಎಲ್ಲರೂ ಸೇರಿ ಅಣ್ಣ-ತಮ್ಮಂದಿರಂತೆ ಇರಬೇಕು ಮತ್ತು ಶಾಂತಿಯನ್ನು ಕಾಪಾಡಬೇಕು ಎಂದರು,
ತೆಕ್ಕಲಕೋಟೆಯ ನವ ಈದ್ಗಾಕ್ಕೆ ಕಂಪೌಂಡ್ ವ್ಯವಸ್ಥೆ ಮತ್ತು ಮತ್ತು ಸಮುದಾಯಕ್ಕಾಗಿ ಶಾದಿ ಮಾಲ್ ವ್ಯವಸ್ಥೆ ಆದಷ್ಟು ಬೇಗ ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಹೇಳಿದರು.
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಮೀಂ ಭಾಂದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಅವರೊಂದಿಗೆ ಹಬ್ಬವನ್ನು ಆಚರಿಸಿದರು.