ಕುರುಗೋಡು :ಪಟ್ಟಣದ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ರವರ SB ಫೌಂಡೇಷನ್ ವತಿಯಿಂದ ನರೇಗಾ ಕೂಲಿಕಾರ್ಮಿಕರೊಂದಿಗೆ ಕಾರ್ಮಿಕ ದಿನಾಚರಣೆಯನ್ನು ಕೇಕ್ ಕತ್ತರಿಸಿ ಮಜ್ಜಿಗೆ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಟಿ.ಹೆಚ್.ಸುರೇಶ್ ಬಾಬುರವರ ಆಪ್ತ ಸಹಾಯಕರಾದ ಹೆಚ್.ಮಲ್ಲೇಶ್ ಮಾತನಾಡಿ ಇ-ಶ್ರಮ ಕಾರ್ಡ್,ಆಯುಷ್ಮಾನ್ ಭಾರತ್-ಆರೋಗ್ಶ ಕರ್ನಾಟಕ ಯೋಜನೆ ಹಾಗೂ ಆಶಾದೀಪಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಮುಂದಿನ ದಿನಗಳಲ್ಲಿ ಈ ಮೇಲಿನ ಕಾರ್ಡ್ ಗಳನ್ನು SB ಫೌಂಡೇಷನ್ ವತಿಯಿಂದ ಉಚಿತವಾಗಿ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಗ್ರಾಮದ ಬಿಜೆಪಿ ಮುಖಂಡರಾದ ಪಾಲಾಕ್ಷರೆಡ್ಡಿ,ವೈ.ಬಸವರಾಜ.ಈಶ್ವರ.ಹೊನ್ನಳ್ಳಿ ಸುಂಕಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಶರಾದ ಷಣ್ಮುಖ.ಮಲ್ಲಪ್ಪ. ಮತ್ತು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ N.C.ಹನುಮೇಶ ರೆಡ್ಡಿ ಹಾಗೂ ನೂರಾರು ನರೇಗಾ ಕಾರ್ಮಿಕರು ಹಾಜರಿದ್ದರು.