ಸಿರುಗುಪ್ಪ : ತಾಲೂಕಿನ ೬೪.ಹಳೇಕೋಟೆ ಗ್ರಾಮದಲ್ಲಿ ವೀರಶೈವ ಯುವಕ ಸಂಘದವತಿಯಿಂದ ೮೮೯ನೇ ವಿಶ್ವಗುರು ಬಸವ ಜಯಂತೋತ್ಸವ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮರಿಶಿವಯೋಗಿ ಮಠದ ಮ.ನಿ.ಪ್ರ.ಸ್ವ.ಶ್ರೀ ಸಿದ್ದಬಸವ ಮಹಾಸ್ವಾಮಿ ಚಾಲನೆ ನೀಡಿದರು.
ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸುಂಮಗಳಿಯರ ಕಳಸದ ಮೂಲಕ ಶ್ರೀಬಸವೇಶ್ವರ ಅವರ ಭಾವಚಿತ್ರ ಮೆರವಣಿಗೆ ನಡೆಯಿತು.
ಗ್ರಾ.ಪಂ ಅಧ್ಯಕ್ಷರು, ಸಂಘದ ಅಧ್ಯಕ್ಷರು, ಚುನಾಯಿತ ಸದಸ್ಯರು, ಪಿ.ಡಿ.ಒ ಹಾಗೂ ಹಿರಿಯ ಮುಖಂಡರು ಇದ್ದರು.