ಬಳ್ಳಾರಿ: ಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಸಾರಿಗೆ ಸಚಿವ ಶ್ರೀರಾಮುಲು ಕ್ಲಾಸ್ ತೆಗೆದುಕೊಂಡಿದ್ದು, ನಿಮಗೆ ಕಾಮನ್ ಸೆನ್ಸ್ ಇಲ್ಲವೇನ್ರೀ ಎಂದು ಆಕ್ರೋಶ.
ವ್ಯಕ್ತಪಡಿಸಿದ್ದಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅಧಿಕಾರಿಗಳ ಯಡವಟ್ಟಿಗೆ ಕೆಂಡಾಮಂಡಲವಾಗಿದ್ದು, ಭಗೀರಥ ಮಹರ್ಷಿಯ ಕಳೆಗುಂದಿದ ಫೋಟೋ ಹಾಗೂ ಕಾಟಾಚಾರದ ಕಾರ್ಯಕ್ರಮ ಆಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರಳಿಗೆ ಹಾಕಿದ್ದ ಹೂವಿಹಾರ ಕಿತ್ತೆಸೆದ ಅವರು ಕಾಟಾಚಾರಕ್ಕೆ ಕೆಲಸ ಮಾಡ್ತೀರಾ, ಬೇಕಾಬಿಟ್ಟಿ ಕಾರ್ಯಕ್ರಮ ಆಯೋಜನೆ ಮಾಡಿದ್ರೆ ನಾನು ಬರಲ್ಲ. ಇಂತಹ ವಿಚಾರದಲ್ಲಿ ರಾಜಿಯಾಗೋ ಪ್ರಶ್ನೆಯೇ ಇಲ್ಲ, ನಿಮ್ಮ ಸಮಜಾಯಿಷಿಗಳನ್ನು ಸಣ್ಣ ಹುಡುಗರಿಗೆ ಹೇಳಿ, ನನಗೆ ಹೇಳಬೇಡಿ ಎಂದು ಸಿಟ್ಟಾಗಿದ್ದಾರೆ. ಬಳ್ಳಾರಿ ಎಡಿಸಿ ಮಂಜುನಾಥ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗಪ್ಪ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.