ಶಾನವಾಸಪುರ ಗ್ರಾಮದ ಮೆಕ್ಕೆಜೋಳದ ಹೊಲಕ್ಕೆ ಬೆಂಕಿ ತಹಸೀಲ್ದಾರರು ಭೇಟಿ

Share and Enjoy !

Shares
Listen to this article

ಸಿರುಗುಪ್ಪ :ತಾಲೂಕಿನ ಶಾನವಾಸಪುರ ಗ್ರಾಮದ ಸರ್ವೆ ನಂ 19 B-2 ವಿಸ್ತೀರ್ಣದ 2 ಎಕರೆಯ ಚಂದ್ರೇಗೌಡ ಎಂಬ ಅನ್ನದಾತನ ಹೊಲದಲ್ಲಿ ಸುಮಾರು 50 ಸೆಂಟ್ಸ್ ನ ಬೆಳೆ ಬೆಂಕಿ ಬಿದ್ದು ಹಾಳಾಗಿದೆ ಮೆಕ್ಕೆಜೋಳ ಬೆಳೆಗೆ ಅಕಸ್ಮಾತ್ತಾಗಿ ಬೆಂಕಿ ತಗಲಿದೆ
ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ಮೆಕ್ಕೆಜೋಳ ಹೊಲಕ್ಕೆ ಬೆಂಕಿ ಬಿದ್ದಿದ್ದು ಪಕ್ಕದ ಹೊಲದಲ್ಲಿದ್ದ ಅನೇಕ ರೈತರುಗಳು ತಕ್ಷಣ ಓಡೋಡಿ ಬಂದು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ
ಆದರೂ 1ಎಕರೆಗೂ ಹೆಚ್ಚು ಬೆಳೆನಷ್ಟ ಹೋಗಿರುವುದಾಗಿ ತಿಳಿದುಬಂದಿದೆ
ಸುದ್ದಿ ತಿಳಿಯುತ್ತಲೇ ಶಾಸಕರ ಪುತ್ರ ಹಾಗೂ ಬಿಜೆಪಿ ಪಾರ್ಟಿಯ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಎಂಎಸ್ ಸಿದ್ಧಪ್ಪನಾಯಕ ತಹಸೀಲ್ದಾರ್ ಮಂಜುನಾಥ ಸ್ವಾಮಿ,ಸಹಾಯಕ ಕೃಷಿ ನಿರ್ದೇಶಕರಾದ ನಜೀರ ಅಹ್ಮದ್   ಕಂದಾಯ ಅಧಿಕಾರಿಗಳು ಗ್ರಾಮಲೆಕ್ಕಿಗರು ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಮುಂದಿನ ಕ್ರಮಗಳನ್ನು ಜರುಗಿಸುವ ಭರವಸೆ ನೀಡಿದ್ದಾರೆ.

Share and Enjoy !

Shares