ವಿಜಯನಗರ/ಕೊಟ್ಟೂರು: ಮೇ:18:-ಕೊಟ್ಟೂರು ಪೋಲೀಸ್ ಠಾಣೆಯ ಪೇದೆ ಕೊಟ್ರಗೌಡ ಠಾಣೆ ಮೇಲಾಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಅಮಾನತು ಮಾಡಲಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ರೀಪಿಂಗ್ ಸಭೆಯಲ್ಲಿ ಠಾಣಾಧಿಕಾರಿ ಆದೇಶವನ್ನು ಉಲ್ಲಂಘಿಸಿದ್ದರಲ್ಲದೆ. ಏಕವಚನದಲ್ಲಿ ಸಭೆಯಲ್ಲಿ ಠಾಣಾಧಿಕಾರಿಗೆ ಕೊಟ್ರಗೌಡ ಮಾತನಾಡಿದ್ದನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ವರದಿ ಕಳುಹಿಸಲಾಗಿತ್ತು.
ಈ ವರದಿ ಅನ್ವಯ ಎಸ್ಪಿ ಡಾ. ಕೆ.ಅರುಣ್ ಅವರು. ಕೊಟ್ರಗೌಡ ಅವರನ್ನು ಅಮಾನತು ಮಾಡಿ ಮಂಗಳವಾರ ಆದೇಶ ಮಾಡಿದ್ದಾರೆ.
ಅಕ್ರಮವಾಗಿ ಮರಳು ಸಾಗಾಣಿಕೆದಾರರ ಮೇಲೆ ನಿಗಾವಹಿಸುವಂತೆ ಠಾಣಾಧಿಕಾರಿಗೆ ಆದೇಶಿದ್ದರೂ ಪಾಲಿಸಿಲ್ಲ. ಅಲ್ಲದೆ ನಾನು ಲೋಕಲ್ ನೀವು ಪಿಎಸ್ ಐ ಆಗಿ ಹೇಗೆ ಕಾರ್ಯನಿರ್ವಹಿಸುತ್ತೀರಿ. ನಿಮ್ಮನ್ನು ಇಲ್ಲಿಂಗ ವರ್ಗಮಾಡಿಸಿಯೇ ಮಾಡಿಸುತ್ತೇನೆ ಎಂದು ದುರ್ವತನೆ ಮಾಡಿದ್ದನ್ನು ಎಸ್ಪಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪಟ್ಟಣದಲ್ಲಿ ಕೆಲವರಿಗೆ ಅಕ್ರಮ ಚಟುವಟಿಕೆ ಮಾಡಲು ಕುಮ್ಮಕ್ಕು ನೀಡಿದ್ದನ್ನು ಎಸ್ಪಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ಪೇದೆ ಕೊಟ್ರಗೌಡ ಅವರನ್ನು ಎಸ್ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.