ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಹಳೆಗನ್ನಡವನ್ನು ಸುಲಲಿತಗೊಳಿಸಿ ಜನರ ಭಾಷೆಯಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ: ಕಸಾಪ ಅದ್ಯಕ್ಷ ಡಾ.ಮಧುಸೂದನ್.

Share and Enjoy !

Shares
Listen to this article

ಸಿರುಗುಪ್ಪ: ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟದ ವತಿಯಿಂದ ಸಿರಗುಪ್ಪದ ಬಸವ ಭವನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಸೋಮುವಾರ ನಡೆಯಿತು. ಕಾರ್ಯಕ್ರಮವನ್ನು ಜ್ಯೊತಿ ಬೇಳಗಿಸುವ ಮೂಲಕ ಕಸಾಪ ಅದ್ಯಕ್ಷ ಡಾ .ಮದುಸೂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿದ ಅವರು ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಹಳೆಗನ್ನಡವನ್ನು ಸುಲಲಿತಗೊಳಿಸಿ ಜನರ ಭಾಷೆಯಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ತಿಳಿಸಿದರು.
ಕಸಾಪದ ಮಾಜಿ ಅಧ್ಯಕ್ಷರು ಹಾಗೂ ದತ್ತಿ ದಾನಿಗಳಾದ ಶ್ರೀ ಹನುಮಂತರೆಡ್ಡಿಯವರು ಮಾತನಾಡಿ ಕನ್ನಡದ ಪರಿಷತ್ತು ಕನ್ನಡ ಭಾಷೆ ,ಸಾಹಿತ್ಯ ಮತ್ತು ಕನ್ನಡಿಗರ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾಗಿ ಆಗಮಿಸಿದ್ದ ಗಡಿನಾಡು ಕವಿಗಳಾದ ಶ್ರೀ ನಾಮ ಮರುಳರಾಧ್ಯರವರು ಪಂಡಿತ ಶ್ರೀ ದೊಡ್ಡಯ್ಯ ಶಾಸ್ತ್ರಿಗಳ ಜೀವನದ ಹಾಗೂ ಶರಣರು ಮತ್ತು ಸಮಾಜದ ಬಗ್ಗೆ ಮಾತನಾಡುತ್ತಾ ಸಮಾನ ಸಮಾಜ ಕಟ್ಟುವಲ್ಲಿ ಶರಣರು ಅಪಾರ ಶ್ರಮವಹಿಸಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೊಬ್ಬ ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕಿ ಶ್ರೀಮತಿ ಕೆ.ಎಂ.ಅನ್ನಪೂರ್ಣ ಇವರು ಸಜ್ಜಲಗುಡ್ಡದ ಶರಣಮ್ಮನವರ ಪವಾಡಗಳನ್ನು ಸಂಕ್ಷಿಪ್ತವಾಗಿ ಹೇಳಿದರು.
ಮುಖ್ಯ ಅತಿಥಿಗಳಾದ ಪೂಜ್ಯಶ್ರೀ ಬಸವರಾಜಪ್ಪ ಶರಣರು ಮಾತನಾಡಿ ಬಸವ ಬಳಗವು ಕಸಾಪದ ಜೊತೆ ಕನ್ನಡದ ಏಳಿಗೆಗೆ ಸದಾ ಸಿಧ್ದವೆಂದು ತಿಳಿಸಿದರು.
ಸಂಗೀತ ಶಿಕ್ಷಕರಾದ ಶ್ರೀ ಎಂ.ಶಾಂತಕುಮಾರ ವಚನಗಾಯನ ಮಾಡಿದರು..ಶಿಕ್ಷಕರಾದ ಶ್ರೀ ವೆಂಕಟೇಶ್ ಯಾದವ್
ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ವಂದಿಸಿದರು.

Share and Enjoy !

Shares