ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಅಸ್ವಸ್ಥರಾದ 15ಜನ ಗ್ರಾಮಸ್ಥರು

Share and Enjoy !

Shares
Listen to this article

ಸಿರುಗುಪ್ಪ.ಮೇ17: ತಾಲೂಕಿನ ಕುರುವಳ್ಳಿ ಗ್ರಾಮಸ್ಥರು ಹೋಟೆಲ್ ಒಂದರಲ್ಲಿ ಮಂಗಳವಾರ ಬೆಳಿಗ್ಗೆ ಇಡ್ಲಿ, ಸಾಂಬರ್, ಚೆಟ್ನಿ ಸೇವಿಸಿ ಸುಮಾರು 15ಜನ ಅಸ್ವಸ್ತರಾದ ಘಟನೆ ಮಂಗಳವಾರ ನಡೆದಿದೆ.
ಗ್ರಾಮದ ಐನೋರು ಪಾರ್ವತಮ್ಮ ಎನ್ನುವವರ ಹೋಟೆಲ್ ನಲ್ಲಿ ಉಪಹಾರ ಸೇವಿಸಿದ್ದ ಮೂರು ಜನ ಮಕ್ಕಳು ಸೇರಿ 15ಜನರ ವಾಂತಿ, ಬೇದಿ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದಾಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು,
ಹೆಚ್ಚಿನ ಚಿಕಿತ್ಸೆಗಾಗಿ ನಗರದಲ್ಲಿರುವ ನೂರು ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

ನಮ್ಮ ಗ್ರಾಮದ ಐನೋರು ಪಾರ್ವತಮ್ಮ ಎನ್ನುವವರ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಮನೆಗೆ ಹೋಗಿದ್ದು, ಮೂರು ಗಂಟೆಯ ನಂತರ ನನಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದು, ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದೇನೆ ಈಗ ಯಾವುದೇ ಸಮಸ್ಯೆ ಕಾಣುತ್ತಿಲ್ಲ ಎಂದು ಹನುಮೇಶ ತಿಳಿಸಿದ್ದಾನೆ.

ಸುಮಾರು 15ಜನ ವಾಂತಿ ಬೇದಿಯಿಂದ ದಾಖಲಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಯಾರ ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಸಂಜೆಯವರೆಗೆ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುವುದು ಎಂದು ವೈದ್ಯ ಪ್ರಶಾಂತ ತಿಳಿಸಿದ್ದಾರೆ.
ಸಿರುಗುಪ್ಪ ನಗರದಲ್ಲಿರುವ ಕೆಲ ರೆಸ್ಟೊರೆಂಟ್ ಗಳಲ್ಲಿ ಬಳೆಸುವ ಅತಿಯಾದ ಟೆಸ್ಟಿಂಗ್ ಸಾಲ್ಟ್ ಮತ್ತು ಅಡುಗೆ ಬಣ್ಣ (ಕಲರ್ ಕೊಟಿಂಗ್ ) ಬಳಕೆ ಹೆಚ್ಚಾಗಿದ್ದು ಇದನ್ನು ನಿಯಂತ್ರಿಸುವ ಬೆಕಾದ ಅಧಿಕಾರಿಗಳು ಕಂಡುಕಾಣದಂತೆ ಜಾಣಕುರುಡತನ ಪ್ರದರ್ಶಿಸುವದು ಮಾತ್ರ ವಿಪಾರ್ಯಸವೆ ಸರಿ.

Share and Enjoy !

Shares