ಎಸಿಬಿ ಬಲೆಗೆ ಬಿದ್ದ ದೇವಲಾಪುರ ಗ್ರಾಮಲೆಕ್ಕಾದಿಕಾರಿ

ವಿಜಯನಗರವಾಣಿ ಸುದ್ದಿ
ಕಂಪ್ಲಿ:ಮೇ.30. ಖಾತಾ ವರ್ಗಾವಣೆಗೆ ಲಂಚದ ಬೇಡಿಕೆ ಸ್ವೀಕರಿಸುವಾಗ ದೇವಲಾಪುರ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಕಂಪ್ಲಿಯಲ್ಲಿ ಸೋಮವಾರ ನಡೆದಿದೆ.
ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಅತೀಫ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ತೋರಣಗಲ್ಲಿನ ಜೆಎಸ್ಡಬ್ಲ್ಯೂನಲ್ಲಿ ಎಚ್.ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ದೂರುರಾದ ಕೆ.ಗಿರಿಧರ್ ಅವರು ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿರುವ ಹೊಲದ ಖಾತಾ ಬದಲಾವಣೆಗಾಗಿ ವಿಎ ಆತೀಫ್ ಅವರು 15 ಸಾವಿರ ಬೇಡಿಕೆ ಇಟ್ಟಿದ್ದರು. ಆದರೆ, 15 ಸಾವಿರ ಬದಲು 5 ಸಾವಿರ ಲಂಚದ ಹಣವನ್ನು ಕಂಪ್ಲಿ ಪಟ್ಟಣದ ಎಪಿಎಂಸಿಯ ತಹಶೀಲ್ದಾರ್ ಕಾರ್ಯಾಲಯ ಬಳಿಯಳಿರುವ ವಿಎ ಕಛೇರಿಯಲ್ಲಿ ವಿಎ ಆತೀಫ್ ಸ್ವೀಕರಿಸುವಾಗ ಎಸಿಬಿ ಬಲೆ ಬಿದ್ದಿದ್ದಾನೆ.
ಭ್ರಷ್ಟಾಚಾರ ನಿಗ್ರಹದಳದ ಬಳ್ಳಾರಿ ವಲಯದ ಎಸ್.ಪಿ ಶ್ರೀಹರಿಬಾಬು ಅವರ ಮಾರ್ಗದರ್ಶನದಲ್ಲಿ ಎಸಿಬಿ ಅವರು ಬೀಸಿದ ಬಲೆಗೆ ಕಂಪ್ಲಿಯ ದೇವಲಾಪುರ ವಿಎ ಆತೀಫ್ ಸಿಕ್ಕಿದ್ದಾನೆ.. ಆರೋಪಿಯನ್ನು ಬಂಧಿಸಲಾಗಿದ್ದು, ಲಂಚದ ಮೊತ್ತವನ್ನು ವಸೂಲಿ ಮಾಡಲಾಗಿದೆ, ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಈ ದಾಳಿ ಸಂದರ್ಭದಲ್ಲಿ ಡಿವೈಎಸ್ಪಿ ವಿ.ಸೂರ್ಯನಾರಾಯಣರಾವ್, ಪಿಐಗಳಾದ ಪ್ರಭುಲಿಂಗಯ್ಯ ಹಿರೇಮಠ್, ಸುಂದರೇಶ್ ಹೊಳ್ಳೆಣ್ಯನವರ್, ಎಚ್ಸಿಗಳಾದ ಸತೀಶ್, ವಸಂತಕುಮಾರ್, ಪಿಸಿಗಳಾದ ದಿವಾಕರ್, ಗೋವಿಂದರಾಜು, ಯುವರಾಜಸಿಂಗ್, ಪ್ರಕಾಶ್, ಚಾಲಕರಾದ ಕೃಷ್ಣ, ಚಂದ್ರಶೇಖರ್ ಇದ್ದರು.

Share and Enjoy !

Shares