ವಿಜಯನಗರ ವಾಣಿ ಸುದ್ದಿ
ವಿಜಯನಗರ ಜಿಲ್ಲೆ : ಕೊಟ್ಟೂರಿನ ರೇಣುಕಾ ಬಡಾವಣೆಯ ನಿವಾಸಿಗಳನ್ನು ಬೆಚ್ಚಿಬೀಳಿಸಿದ್ದ ಮನೆಗಳ್ಳರ ತಂಡವನ್ನು ಕೊಟ್ಟೂರು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕೊಟ್ಟೂರಿನ ರೇಣುಕಾ ಬಡಾವಣೆಯಲ್ಲಿ ಚಿನ್ನ ಮತ್ತು ನಗದು ದೋಚಿ ಪರಾರಿಯಾಗಿದ್ದ ಕಳ್ಳರ ತಂಡವನ್ನು ಬೇಧಿಸಲು ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಕೊಟ್ಟೂರು ಸರ್ಕಲ್ ಇನ್ಸ್ ಪೆಕ್ಟರ್ ಸೋಮಶೇಖರ್ ಕೆಂಚರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಗುರುವಾರ ಬೆಳಗಿನ ಜಾವ ಆರೋಪಿತ ರಾದ ಪೋತರಾಜ್ ಕುಪ್ಪಿನಕೆರೆ. ವಿಶ್ವನಾಥ್ ಕೊಟ್ಟೂರು. ಜಾಕೀರ್ ಕೊಟ್ಟೂರು ಮತ್ತು ಸುದರ್ಶನ ಕೊಟ್ಟೂರು.ಇವರನ್ನು ಮನೆಗಳ್ಳತನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸಂಶಯಾಸ್ಪದ ರೀತಿಯಲ್ಲಿ ಇವರುಗಳನಡೆ ಬಗ್ಗೆ,ಹಾಗು ರಾಯಚೂರಿನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಬಂಧಿತರಿಂದ 140 ಗ್ರಾಂ ಚಿನ್ನ 200 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಒಂದು ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾದ ತಂಡದ ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಕೂಡ್ಲಿಗಿ ಪಿಎಸ್ಐ ಮಲಿಕ್ ಸಾಬ್ ಕಿಲಾರಿ, ಕೊಟ್ಟೂರು ಪಿಎಸ್ಐ ವಿಜಯ್ ಕೃಷ್ಣ, ಎಎಸ್ಐ ರುದ್ರಮುನಿ,ಸಿಬ್ಬಂದಿಗಳಾದ ರಾಘವೇಂದ್ರ ಚಂದ್ರಮೌಳಿ, ತಿಪ್ಪೇಸ್ವಾಮಿ ಎನ್ಎಮ್ ಸ್ವಾಮಿ, ರೇವಣಾರಾಧ್ಯ, ಮಂಜುನಾಥ, ಶಂಕರಗೌಡ,ಜಗದೀಶ ಚಾಲಕ ಮೂಗಣ್ಣ ಇವರುಗಳಿಗೆ ಪ್ರಶಂಸೆ ವ್ಯಕ್ತ ಪಡಿಸಿ ಬಹುಮಾನ ಘೋಷಿಸಿದ್ದಾರೆ.
——Advertisement——-