ಬಿಜೆಪಿ ಶಾಸಕನಿಂದ ನನಗೆ ಅನ್ಯಾಯವಾಗಿದೆ ವಿಧಾನಸೌಧದಲ್ಲೆ ನೇಣು ಹಾಕಿಕೊಳ್ಳಲು ಮುಂದಾದ ಕನಕಗಿರಿ ಕ್ಷೇತ್ರದ ಮಹಿಳಾಧಿಕಾರಿ

Share and Enjoy !

Shares
Listen to this article

ಕಾರಟಗಿ: ಬೆಂಗಳೂರಿನ ವಿಧಾನಸೌಧದಲ್ಲಿ ದಿಡೀರ್ ಭೇಟಿ ನೀಡಿದ (ಸಿಡಿಪಿಓ) ಸಮಾಜ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ವೇತ ಕ್ಷೇತ್ರದ
ಮಹಿಳಾಧಿಕಾರಿಯೊಬ್ಬರು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರಿಂದ ತನಗೆ ಅನ್ಯಾಯವಾಗಿದೆ ಎಂದು ಮನನೊಂದು ಗದ್ದಲ ಎಬ್ಬಿಸಿ ವಿಧಾನಸೌಧದಲ್ಲಿರುವ ಬಿಜೆಪಿ ಶಾಸಕ ಬಸವರಾಜ್ ದಡೆಸಗೂರು ಕಚೇರಿಯಲ್ಲಿ ನೇಣು ಬಿಗಿದುಕೊಳ್ಳಲು ಮುಂದಾದ ಘಟನೆ ಬೆಂಗಳೂರಿನ ನಲ್ಲಿ ಸೋಮವಾರದಂದು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೇಸುಗೂರು ರವರ ಕೊಠಡಿಯಲ್ಲಿ ನಡೆದಿದೆ ಎನ್ನಾಲಾಗುತ್ತಿದೆ.

ದಿಡೀರ್ ಭೇಟಿ ನೀಡಿದ ಮಹಿಳೆ ಶಾಸಕರೊಂದಿಗೆ ಮಾತನಾಡಿ ನಿನ್ನಿಂದ ನನಗೆ ಅನ್ಯಾಯವಾಗಿದೆ ಸರಿಪಡಿಸದಿದ್ದಲ್ಲಿ ನಿನ್ನ ಕೊಠಡಿಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಳ್ಳುವದಕ್ಕೆ ಮುಂದಾದಾಗ
ಕೂಡಲೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ಕಿರುಚಿಕೊಂಡಿದ್ದರಿಂದ ಸ್ಥಳಕ್ಕೆ ಧಾವಿಸಿದ ಭದ್ರತಾ ಪೊಲೀಸರು ಮಹಿಳೆಯನ್ನು ನೇಣು ಬಿಗಿದು ಕೊಳ್ಳಲು ಹೊರಟ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆಂದು ಹೆಳಲಾಗುತ್ತಿದೆ .

ಸದ್ಯ ಶಾಸಕ ದಡೇಸಗೂರ ಕೊಠಡಿಗೆ ಬಿಗಿ ಭದ್ರತೆ ನೀಡಲಾಗಿದೆ.ಆ ಮಹಿಳಾದಿಕಾರಿ ವಿಧಾನಸೌಧ ಮುಂದುಗಡೆ ಕಣ್ಣೀರಿಟ್ಟು ನಡೆದಾಡುವ ದೃಶ್ಯ ಖಾಸಗಿ ಮಾಧ್ಯಮದವರು ಸರೆ ಹಿಡಿದಿದ್ದಾರೆ. ನಂತರ ಮಹಿಳಾ ಅಧಿಕಾರಿ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ನನಗೆ ನ್ಯಾಯ ಕೊಡಿಸುವವರೆಗೆ ಹೋರಾಡುತ್ತೇನೆ ಎಂದಿದ್ದಾರೆ.ಈ ಮಹಿಳಾದಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು.ಈ ಹಿಂದೆ ಇವರಿಬ್ಬರ ಸಂಭಾಷಣೆಯ ಆಡಿಯೊ ಕೂಡ ವೈರಲ್ ಆಗಿತ್ತು ಈ ಎಲ್ಲಾ ಘಟನಾವಳಿಗಳು ನೊಡಿದರೆ ಮುಂದಿನ ಚುನಾವಣೆ ಯಲ್ಲಿ ಶಾಸಕರ ಭವಿಷ್ಯ ನಿರ್ದಾರವಾಗಲಿದೆ ಎನ್ನುವದು ಸಾರ್ವ ಜನಿಕವಲಯದಲ್ಲಿ ಕೇಳಿಬರುತಿದೆ.

Share and Enjoy !

Shares