’ಸಿರುಗುಪ್ಪ : ನಗರದ ಟಿಪ್ಪು ಸುಲ್ತಾನ್ ವೃತ್ತದ ಬಳಿಯಿರುವ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮಾಜಿ ಶಾಸಕನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಬಿ ಎಂ ನಾಗರಾಜ ಇವರ 51ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳು ಸಂಭ್ರಮಗೊಂಡಿದ್ದರು ಅಭಿಮಾನಿಗಳು ಬುದ್ಧಿಮಾಂದ್ಯ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಅಭಿಮಾನಿಗಳು ತಮ್ಮ ನಾಯಕನಿಗೆ ಉತ್ತಮ ಭವಿಷ್ಯ ಹಾಗೂ ಅಧಿಕಾರ ಮತ್ತು ಆಯುಷ್ಯ ವೃದ್ಧಿಯಾಗಲಿ ಎಂದು ನಗರದ ಶ್ರೀ ಶಂಭುಲಿಂಗೇಶ್ವರ,, ಪ್ಯಾಟೆ ಆಂಜನೆಯ್ಯ ಸ್ವಾಮಿ, ವೇಣುಗೋಪಾಲಸ್ವಾಮಿ ರಾಯರ ಮಠ, ಮಾರೆಮ್ಮ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅರ್ಚನೆ ಸಲ್ಲಿಸಿದರು.
ನಗರದ ಆದೋನಿ ರಸ್ತೆ ಬಳಿ ಇರುವ ಸಾರ್ವಜನಿಕ 100 ಹಾಸಿಗೆಯ ಆಸ್ಪತ್ರೆಯ ಒಳಿರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ಹಂಚಿದರು. ತಾ. ಬ್ಲಾಕ್ ಕ್ರಾಂಗೇಸ್ ಅಧ್ಯಕ್ಷ ಕರಿಬಸಪ್ಪ ಮಾತನಾಡಿ ಮಾಜಿ ಶಾಸಕ ಬಿ.ಎಂ.ನಾಗರಾಜ ಇವರು ಸರಳ ಸಜ್ಜನಿಕೆಯ ವ್ಯಕ್ತಿ ಕಳೆದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ನಿಜವಾದ ಫಲನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಿತಾಲೂಕಿನಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ, ಇಂತಹ ತಮ್ಮ ನಾಯಕರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳು ಆಚರಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು
ತೆಕ್ಕಲಕೋಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರುದ್ರಗೌಡ, ನಗರಸಭೆ ಮಾಜಿ ಅಧ್ಯಕ್ಷ ದೇಶನೂರು ನಾಗರಾಜ, ಯು.ಕೊದಂಡರಾಮು,ಎಪಿಎಂಸಿ ಮಾಜಿ ಅಧ್ಯಕ್ಷ ರಾಮಸ್ವಾಮಿ ಸಾಹುಕಾರ್, ನಗರಸಭೆ ಸದಸ್ಯ ಹೆಚ್.ಗಣೇಶ, ಕಾಯಿಪಲ್ಲ ನಾಗರಾಜ, ಜೀವನ ನಿಧಿ ಟ್ರಸ್ಟ್, ರಕ್ತಬಂಢಾರದ ಸಂಸ್ಥಾಪಕ ಲೋಕೇಶ, ಮುಖಂಡರಾದ ವೆಂಕಟೇಶ, ಮುತ್ಯಾಲಯ್ಯ ಶೆಟ್ಟಿ, ಇಬ್ರಾಹಿಂಪುರ ಉಮೇಶ್ ಗೌಡ, ಬಗ್ಗೂರುಗೌಡ. ಸುಭಾನ್ ಸಾಬ್, ಕೋಟಿರೆಡ್ಡಿ, ಪವನಕುಮಾರ ದೇಸಾಯಿ, ಕೊಡದಂಡರಾಮ, ಖಲೀಮುಲ್ಲಾ, ಹರಿಕೃಷ್ಣ, ದಸ್ತಗಿರಿ ಗೌಸ್ ರಬ್ಬಾನಿ ಸೇರಿದಂತೆ ಅನೇಕರು ಇದ್ದರು.