ಬೀದರ್ ನಲ್ಲಿ ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ ಅಧಿಕಾರಿಗಳು.

Share and Enjoy !

Shares
Listen to this article

ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ದಾಳಿ ಮಾಡಿ ಶಾಕ್ ನೀಡಿದ್ದು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ದಾಳಿ ಮಾಡಿ ಎಸಿಬಿ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ… ಪಶು ವೈದ್ಯಕೀಯ ಹಾಗೂ ಪಶು ಮೀನುಗಾರಿಕೆ ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ಅಧಿಕಾರಿ ಮೃತ್ಯುಂಜಯ ಕಿರಣಾ ಅವರ ನಿವಾಸದ ಮೇಲೆ ಎಸಿಬಿ ಪೊಲೀಸರ ತಂಡದಿಂದ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ…

ಬೀದರ್ ನ ಗುಮ್ಮೆ ಕಾಲೋನಿಯಲ್ಲಿರುವ ನಿವಾಸ, ಪಶು ವಿವಿಯ ಕಚೇರಿ, ಭಾಲ್ಕಿ ತಾಲೂಕಿನ ಹಾಲಹಳ್ಳಿಯ ನಿವಾಸ ಹಾಗೂ ಕಲಬುರಗಿಯ ಮಹಾಗಾಂವ್ ನ ನಿವಾಸದ ಮೇಲೂ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ… ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಇಂದು ಎಸಿಬಿ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ‌…

ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ‌ ಕಚೇರಿ ಹಾಗೂ ಕಲಬುರಗಿಯ ನಿವಾಸದ ಮೇಲೂ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ… ಬೀದರ್ ನ ಗುಂಪಾ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಪೊಲೀಸರು ದಾಖಲೆ ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ… ಎಸಿಬಿ ಎಸ್ಪಿ ಅಮರನಾಥ್ ರೆಡಿ ಮಾರ್ಗದರ್ಶನ ದಲ್ಲಿ ಬೀದರ್ ಎಸಿಬಿ ಪೊಲೀಸ್ ಅಧಿಕಾರಿ ಹಣಮಂತರಾಯ, ಶ್ರೀಕಾಂತ್ ಸೇರಿದಂತೆ ಹಲವು ಅಧಿಕಾರಿಗಳ ತಂಡದಿಂದ ದಾಳಿ ಮಾಡಲಾಗಿದೆ…

Share and Enjoy !

Shares