ಪರವಾನಗಿ ಭೂಮಾಪಕ ಕೊಪ್ಪಳ ಎಸಿಬಿ ಬಲೆಗೆ

Share and Enjoy !

Shares
Listen to this article

ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಶ್ರೀ ಹನುಮಪ್ಪ ತಂದೆ ಸುಭಾಸಪ್ಪ ಮ್ಯಾದನೇರಿ ಇವರು ತಮ್ಮ ಜಮೀನನ್ನು ಪಾಲುವಾಟ್ನಿ ಮಾಡಿ, ಸ್ಕೆಚ್ ಮಾಡಿ, 11ಇ ನೀಡಲು ADLR ಆಫೀಸ್ ಕೊಪ್ಪಳದಲ್ಲಿ ಅರ್ಜಿ ನೀಡಿದ್ದು ಸರ್ವೇ ಕಛೇರಿಯ ಪರವಾನಗಿ ಭೂಮಾಪಕರಾದ ಶ್ರೀ ರುದ್ರೇಶ್ ಇವರು ಅರ್ಜಿದಾರರ ಕೆಲಸ ಮಾಡಿಕೊಡಲು 20 ರಿಂದ 25 ಸಾವಿರ ರೂಪಾಯಿವರೆಗೂ ಖರ್ಚಾಗುತ್ತದೆ ಅಂತಾ ಹೇಳಿ ಅಡ್ವಾನ್ಸ್ ಆಗಿ ಅರ್ಜಿದಾರರಿಂದ 16000/- ರೂ ಹಣವನ್ನು ಸ್ವೀಕರಿಸಿ ಬಾಕಿ 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಇದರಿಂದ ಬೇಸತ್ತ ಅರ್ಜಿದಾರರು ಕೊಪ್ಪಳದ ಎಸಿಬಿ ಠಾಣೆಗೆ ದಿನಾಂಕ 23/06/2022 ರಂದು ಬಂದು ಈ ಬಗ್ಗೆ ದೂರು ನೀಡಿರುತ್ತಾರೆ. ಪ್ರಕರಣವನ್ನು ದಾಖಲಿಸಿಕೊಂಡ ಎಸಿಬಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು ಆರೋಪಿ ಪರವಾನಗಿ ಭೂಮಾಪಕ ಶ್ರೀ ರುದ್ರೇಶ್ ಇವರು ಇಂದು ಮುಂಜಾನೆ 9;25 ಗಂಟೆ ಸುಮಾರಿಗೆ ಕೊಪ್ಪಳದ ಬಸವೇಶ್ವರ ಸರ್ಕಲ್ ದಲ್ಲಿ ಬಂದು ಫಿರ್ಯಾದಿಯವರಿಂದ ತಾವು ಕೇಳಿದ್ದ 5000/- ರೂ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಳ್ಳಾರಿ ಎಸಿಬಿ SP ಶ್ರೀಹರಿಬಾಬು ರವರ ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಠಾಣೆಯ DSP ಶ್ರೀ ಶಿವಕುಮಾರ್ MC ರವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಇನ್ಸಪೆಕ್ಟರ್ ಗಳಾದ ಶ್ರಿ ಶಿವರಾಜ್ ಇಂಗಳೆ, ಆಂಜನೇಯ ಡಿಎಸ್. ಹಾಗು ಸಿಬ್ಬಂದಿಗಳಾದ ಶ್ರೀ ಸಿದ್ದಯ್ಯ, ರಂಗನಾಥ, ಗಣೇಶ್, ಜಗದೀಶ್, ಉಮೇಶ್, ಶ್ರೀಮತಿ ಸವಿತಾ, ಹಾಗು ಚಾಲಕರಾದ ಆನಂದ ಮತ್ತು ಬಸಪ್ಪ ರವರು ಭಾಗವಹಿಸಿರುತ್ತಾರೆ

Share and Enjoy !

Shares