ಹಗಲಿರಳು ಅಕ್ರಮ ಮರಳು ಸಾಗಣಿಕೆ ದಂಧೆ ಕಂಡುಕಾಣದಂತಿರೊ ಅಧಿಕಾರಿಗಳು.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ನಗರದ ಹೊರ ವಲಯದ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅರಳಿಗನೂರು ಗ್ರಾಮದ ರಸ್ತೆಯಿಂದ ರಾಜ ರೊಷವಾಗಿ ನಡೆಯುತ್ತಿರವ ಅಕ್ರಮ ಮರಳು ದಂಧೆ
ಕಂಡು ಕಾಣದಂತಿರುವ ಅದಿಕಾರಿಗಳು.
ಅರಳಿಗನೂರ ಗ್ರಾಮದ ವೇದಾವತಿ ನದಿಯಿಂದ ನಗರದ ಹೊರವಲಯದ ಅರಳಿಗನೂರ ರಸ್ತೆಯ ಖಾಸಗಿ ಜಾಗದಲ್ಲಿ ಹಗಲಿರಳು ಅಕ್ರಮ‌ ಮರಳು ಸಾಗಾಣಿಕೆ ಮಾಡಿ ದಾಸ್ತಾನು ಮಾಡುತ್ತಿದ್ದಾರೆ. ಕಾಟನ್‌ಮಿಲ್ ಸ್ಥಾಪನೆ ಮಾಡುತ್ತೇವೆಂದು ಹೇಳುತ್ತಿರುವ ಉದ್ದಿಮೆದಾರರು ಹಗಲಿರಳು ಹೊತ್ತಿನಲ್ಲಿಯೇ ಅವ್ಯಾಹತವಾಗಿ ಅಕ್ರಮ ಮರಳು ಶೇಖರಣೆ ಮಾಡುತ್ತಿದ್ದು ಸರ್ಕಾರದ ವ್ಯವಸ್ಥೆಯನ್ನೇ ಅಣಕಿಸುತ್ತಿದೆ.
ಕಳೆದೆರಡು ದಿನಗಳಿಂದಲೂ ಇಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಕಾರ್ಯ ನಡೆಯುತ್ತಿದ್ದು, ಇವರ ಹಿಂದೆ ಕಾಣದ ಕೈಗಳು ಸಹಕರಿಸುತ್ತಿವೆ ಎಂಬ ಮಾತು ಕೇಳಿ ಬರುತ್ತಿವೆ.

ಸಿರುಗುಪ್ಪ ರಸ್ತೆಯಿಂದ ಅರಳಿಗನೂರು ಕ್ರಾಸ್ ಮುಖಾಂತರ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದರೆ ಎದುರಿಗೆ ಅಕ್ರಮವಾಗಿ ಮರಳು ಸಾಗಣೆಯ ಟ್ರಾಕ್ಟರ್ ವಾಹನಗಳು ಬರುತ್ತವೆ. ರಾಜಾರೋಷವಾಗಿ ಹಗಲು ಹೊತ್ತಿನಲ್ಲಿಯೇ ಮರಳು ಸಾಗಣೆ ಮಾಡುತ್ತಿದ್ದು ಖಾಸಗಿಯವರ ಜಾಗೆಯಲ್ಲಿ ಈ ರೀತಿ ಸಂಗ್ರಹಿಸಿದ ಮರಳಿನ ರಾಶಿಯೇ ಇದೆ.
ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಿರಿಸಲಾಗಿ ನಾನು ಇಲ್ಲಿಯ ಉಸ್ತವಾರಿ ನಮ್ಮ ಸಂಸ್ಥೆ ದೊಡ್ಡದಿದೆ ಹಲವಾರು ಕಡೆ ಖಾರ್ಕಾನಗಳಿವೆ ಇದಕ್ಕೆ ಸಂಬಂದಿಸದವರು ರಾಜಕೀಯ ದುರಿಣರು ಎಂದು ರೌಡುರುಮಂಜುನಾಥ ರೆಡ್ಡಿ ಎಂಬವವರು ಹೆಳುವ ವಿಧಾನ ನೊಡಿದರೆ ಇಲ್ಲಿ ಯಾವ ಅದಿಕಾರಿಳು ಏನು ಮಾಡಲಾರರು ಎಂಬವಂತಿತ್ತು.
ಆದರು ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಅದಿಕಾರಿಗಳ ಮೌನವೇಕೆ ಎನ್ನುವದೆ ಸಾರ್ವಜನಿಕರ ಪ್ರಶ್ನೆ ಯಾಗಿದೆ .
ಈಗಲಾದರು ಅಕ್ರಮ ಮರಳು ಸಾಗಣಿಕೆ ನಿಲ್ಲಿಸಿ ದಾಸ್ತಾನು ಮಾಡಿದ ಮರಳು ವಶ ಪಡಸಿ ಕೊಳ್ಥಾರ? ಜಾಣನಡೆಗೆ ಮುಂದಾಗುತ್ತಾರ? ಕಾದು ನೊಡಬೆಕಿದೆ.

Share and Enjoy !

Shares