ಕಂಪ್ಲಿಯಲ್ಲಿ ಎಸಿಬಿ ದಾಳಿ- ಪಿಡಿಒ, ಗ್ರಾ.ಪಂ.ಸದಸ್ಯ ಸೇರಿ ಮೂವರ ಬಂಧನ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಕಂಪ್ಲಿ: ಪಟ್ಟಣದ ಎಪಿಎಂಸಿ ಹತ್ತಿರದ ಕಟ್ಟಡದಲ್ಲಿ ಕೃಷಿ ಜಮೀನು ಬದಲಾವಣೆಗೆ ಸಂಬಂಧಿಸಿದಂತೆ ದೂರುದಾರರಿಂದ 20 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ಗುರುವಾರ ಸಂಜೆ ದಾಳಿ ಮಾಡಿ ಗ್ರಾ.ಪಂ.ಪಿಡಿಒ, ಸದಸ್ಯ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ನಿವಾಸಿ ನಾರಯಣಸ್ವಾಮಿ ಎನ್ನುವವರು ನಂ.10 ಮುದ್ದಾಪುರ ಗ್ರಾ.ಪಂ. ವ್ಯಾಪ್ತಿಯ ತಮ್ಮ ಜಮೀನನ್ನು ಎನ್ಎ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥಕ್ಕೆ ಪಿಡಿಒ, ಗ್ರಾ.ಪಂ ಸದಸ್ಯರು ಹಾಗೂ ಮುಖಂಡರೊಬ್ಬರು 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಸಂಜೆ ನಾರಾಯಣಸ್ವಾಮಿ ಮಳಿಗೆಯಲ್ಲಿ 20 ಸಾವಿರ ನಗದು ಹಣ ತೆಗೆದುಕೊಳ್ಖುವಾಗ ಬಳ್ಳಾರಿ ವಲಯದ ಎಸಿಬಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿ.ಸೂರ್ಯನಾರಾಯಣರಾವು, ಪಿಐ ಪ್ರಭುಲಿಂಗಸ್ವಾಮಿ ಹಿರೇಮಠ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಗ್ರಾಪಂ ಪಿಡಿಒ ಬೀರಲಿಂಗ, ಗ್ರಾ.ಪಂ ಸದಸ್ಯ ಬಳ್ಳಾರಿ ಮಾಧವ ಮತ್ತು ಮುಖಂಡ ವಿಪ್ರದ ಭೀಮೇಶ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಈ ದಾಳಿಯಲ್ಲಿ ಪಿಐ ಸುಂದರೇಶ ಹೊಳಣ್ಣನವರ್, ಹೆಚ್ಸಿಗಳಾದ ಸತೀಶ್, ವಸಂತಕುಮಾರ್, ಪಿಸಿಗಳಾದ ದಿವಾಕರ್, ಪ್ರಕಾಶ್, ಯುವರಾಜಸಿಂಗ್, ಗೋವಿಂದ , ಕೃಷ್ಣ, ಚಂದ್ರಶೇಖರ್ ಭಾಗವಹಿಸಿದ್ದರು.

Share and Enjoy !

Shares