ವಿಜಯನಗರವಾಣಿ ಸುದ್ದಿ:
ಕೊಟ್ಟೂರು : ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಟ್ಟೂರು ಪಟ್ಟಣವನ್ನು ಬೆಚ್ಚಿಬೀಳಿಸಿದ್ದ ಅಪಹರಣ ಕೃತ್ಯವನ್ನು , ಘಟನೆ ನಡೆದು 24 ಗಂಟೆಗಳಲ್ಲಿಯೆ ಬೇಧಿಸಿ ಏಳು ಜನ ಅಪಹರಣಕಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಆಪಹರಣಕ್ಕೊಳಗಾದ ಹಾಲೇಶ ರವರ ದೂರು ಆಧರಿಸಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಡಾ.ಕೆ ಅರುಣ್ ಮತ್ತು ‘ಹರೀಶ,ರೆಡ್ಡಿ ಡಿವೈಎಸ್‌ಪಿ ಕೂಡ್ಲಿಗಿ , ರವರ ಮಾರ್ಗದರ್ಶನದಲ್ಲಿ ಮೂರು ತನಿಕಾ ತಂಡಗಳನ್ನು ರಚಿಸಿ ಅಪಹರಣಕಾರರ ಪತ್ತೆಗೆ ಬಲೆ ಬೀಸಲಾಗಿತ್ತು. ತನಿಖೆಯ ಜಾಡು ಹಿಡಿದು ಹೊರಟ ತಂಡವು ಅಪಹರಣಕಾರರ ಚಲನವಲನಗಳನ್ನು ಆಧರಿಸಿದ ಕಣ್ಗಾವಲು ಕ್ಯಾಮರಾದ ಕ್ಷಣಗಳು ಹಾಗು ತಂತ್ರಜ್ಞಾನ ಒಳಗೊಂಡ ಕಾರ್ಯಚರಣೆಯಲ್ಲಿ ಬಂಧಿತರಾದ
ಮಂಜು – ಮಂಜುನಾಥ – ಇಡ್ಲಿ ಮಂಜು ದಾವಣಗೆರೆ, ಶಾಂತಕುಮಾರ ಜಗಳೂರು,
ರಾಕೇಶ , ದಾವಣಗೆರೆ,
ಚಿರಾಗ್, ಜಗಳೂರು ಶಿವಕುಮಾರ ರಾಣೆಬೆನ್ನೂರ.
ರಾಹುಲ್ ಕಂದಗಲ್ ಗ್ರಾಮ, ಆಲ್ತಾಫ್ ಜಗಳೂರು,ರವರುಗಳನ್ನು ದಾವಣಗೆರೆ ನಗರದಲ್ಲಿ ಪತ್ತೆ ಮಾಡಿ ಗುರುವಾರದಂದು ರಂದು ರಾತ್ರಿ 9 ಗಂಟೆಗೆ ವಶಕ್ಕೆ ಪಡೆದಿದ್ದಾರೆ . ಬಂಧಿತರಿಂದ 16, 52 ಲಕ್ಷ ರೂಪಾಯಿಗಳನ್ನು ಜಪ್ತು ಪಡಿಸಿಕೊಂಡು, ಕೃತ್ಯಕ್ಕೆ ಬಳಸಿದ ಕಾರು, ಐದು ಮೊಬೈಲ್ ಫೋನ್ ಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ತನಿಕಾ ತಂಡದ ಪೊಲೀಸ್ ಅಧಿಕಾರಿಗಳಾದ ಸಿಪಿಐ ಸೋಮಶೇಖರ, ಕೆಂಚರಡ್ಡಿ,, ವಿಜಯ ಕೃಷ್ಣ ಪಿಎಸ್ಐ ಕೊಟ್ಟೂರು ಎಂ ಭಾಷಾ, ನಾಗಭೂಷಣ, ರಾಜೇಂದ್ರ ಪ್ರಸಾದ್ ಅಂಜನಮೂರ್ತಿ, ಟಿ ಮಂಜಣ್ಣ ಸಿಪಿಐ ಹೆಚ್ ಬಿ ಹಳ್ಳಿ ಜಯಪ್ರಕಾಶ್ ಪಿಎಸ್ಐ ಚಿತ್ತವಾಡಗಿ ಜಾವೀದ್ ರಾಘವೇಂದ್ರ ಕೊಟ್ರೇಶ, ಎನ್ ಎಂ ಸ್ವಾಮಿ, ಕಲ್ಲೇಶ ಹಾಲೇಶ ಇವರುಗಳಿಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ