ವಿಜಯನಗರವಾಣಿ
ಬಳ್ಳಾರಿ : ಸಿಮಾಂದ್ರದ ರಸ್ತೆ ಸಂಪರ್ಕ ಹೊಂದಿದ್ದ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮೇಲೆ ಹೊರಟಿದ್ದ ಲಾರಿಯೊಂದು ನದಿಯಲ್ಲಿ ಪಲ್ಟಿ ಹೊಡೆದ ಪಾರಣಾಮ ಲಾರಿಚಾಲಕರಿಬ್ಬರು ನೀರಿನಲ್ಲಿ ಜಿವನ್ಮರಣ ಹೊರಾಟದಲ್ಲಿದ್ದರು
ಲಾರಿಯಲ್ಲಿದ್ದ ಇಬ್ಬರು ಚಾಲಕರು ಲಾರಿಯ ಕಂಬಿ ಹಿಡದು ಕುಳಿತಿದ್ದರು ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆಗೆ ಮುಂದಾದಗ ಕೈಜಾರಿ ನೀರಿನ ರಬಸಕ್ಕೆ ನೀರುಪಾಲಾಗಿದ್ದು, ಒರ್ವ ಚಾಲಕ ನೀರುಪಾಲದರೆ ಮತ್ತೋರ್ವ ಚಾಲಕ ಗಿಡದ ಆಸರೆ ಪಡೆದು ನಿಂತಿದ್ದ ರಾತ್ರಿಇಡಿ ಕಾರ್ಯಚಾರಣೆ ನಡೆಸಿದರು. (ಸುರುಪುರದಿಂದ ಆಗಮಿಸಿದ್ದ )ಅಗ್ನಿಶಾಮಕ ಸಿಬ್ಬಂದಿಗಳು ಇಂದು ಬೆಳಗಿನ ಜಾವಆತನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ ಹನ್ನೊಂದು ಗಂಟೆಗಳ ಕಾಲ ನೀರಿನಲ್ಲಿದ್ದ ವ್ಯಕ್ತಿ ಕರ್ನೂಲ ಜಿಲ್ಲೆಯ ನಂದಿ ಕೊಟ್ಟುರಿನ ಮೂಲದ ಆಹ್ಮದ್ ಎಂದು ತಿಳಿದು ಬಂದಿದ್ದು ಈತನನ್ನ
ತಪಾಸಣೆಗಾಗಿ ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಕಳುಹಿಸದ್ದಾರೆ.
ಸ್ಥಳದಲ್ಲಿಯೆ ಜಿಲ್ಲಾಧಿಕಾರಿ ಪವನ್ ಕೂಮಾರ್ ಮಾಲಪಾಟಿ ,ಪೋಲಿಸ್ ವರಿಷ್ಠಾದಿಕಾರಿ ಸೈದುಲ್ ಅಡಾವತ್ ಮತ್ತು ತಸಿಲ್ದಾರರು ಸಿಪಿಐ ಯಶವಂತ ಬಿಸನ್ಲಳ್ಳಿ
ಪಿಎಸ್ ಐ,ಕೆ ರಂಗೈಯ್ಯ ಬಿಜೆಪಿ ಯುವ ಘಟಕ ತಾಲೂಕ ಅದ್ಯಕ್ಷ ಎಮ್ ಎಸ್ ಸಿದ್ದಪ್ಪ ಉಪಸ್ಥಿತಿರಿದ್ದರು.
ಶಾಸಕರಾದ ಎಮ್ ಎಸ್ ಸೋಮಲಿಂಗಪ್ಪ ಬೆಟಿನಿಡಿ
ನೀರಿನಲ್ಲಿ ಕೊಚ್ಚಿಹೊದ ವ್ಯಕ್ತಿ ಗಾಗಿ ಶೊದಕಾರ್ಯ ಮುಂದುವರೆಸಲು ಸೂಚಿಸಿದ್ದು ಶೊದಕಾರ್ಯ ಮುಂದುವರೆದಿದೆ.