ವಿಜಯನಗರವಾಣಿ
ಬಳ್ಳಾರಿ ಆ.06 : ನಗರದ ಗುಡ್ಡ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದರೆ ಜನರು ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ ಇದು ಹಳೆಯ ಚಿತ್ರಗಳೆಂದು ಸುಮ್ಮನಾಗಿದ್ದರು.
ಅದರೆ ಕಳೆದ ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕೂಡಲೇ ಗುಡ್ಡ ಪ್ರದೇಶಕ್ಕೆ ತೆರಳಿ ಚಿರತೆ ಪತ್ತೆಗೆ ಮುಂದಾಗಿದ್ದರು. ಆದರೆ, ಚಿರತೆ ಸುಳಿವು ಸಿಕ್ಕಿರಲಿಲ್ಲ.ಆದರೆ ನಿನ್ನೆ ನಗರದ ಇನ್‌ಫ್ಯಾಂಟ್ರಿ ರಸ್ತೆಯ ಕುಷ್ಠರೋಗಿಗಳ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿ ಸಂಜೆ ಚಿರತೆಯೊಂದು ಕಾಣಿಸಿಕೊಂಡಿದೆನಗರದ ಇನ್‌ಫ್ಯಾಂಟ್ರಿ ರಸ್ತೆಯ ಕುಷ್ಠರೋಗಿಗಳ ದಯಾ ಕೇಂದ್ರದ ಬಳಿಯ ಗುಡ್ಡ ಪ್ರದೇಶದಲ್ಲಿ ಸಂಜೆ ಚಿರತೆಯೊಂದು ಕಾಣಿಸಿಕೊಂಡಿದೆಅದೇ ಸಮಯಕ್ಕೆ ಮತ್ತೊಂದು ಕಡೆ ಇನ್ನೊಂದು ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರ ಅತಂಕ ಹೆಚ್ಚುವಂತೆ ಮಾಡಿದೆ. ಈಗ ಪುನಃ ನಿನ್ನೆಯಿಂದ ಚಿರತೆ ಪ್ರತ್ಯಕ್ಷವಾಗಿರೋದು ದೊಡ್ಡ ತಲೆ ನೋವಿಗೆ ಕಾರಣವಾಗಿದೆ ವಿಷಯ ತಿಳಿಯುತ್ತಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ನಿನ್ನೆ ಮತ್ತು ಇಂದು ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಚಿರತೆ ಪತ್ತೆಯಾದ ಸ್ಥಳ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯೇಕ್ಷವಾಗಿರುವುದು ಗುಡ್ಡದಂಚಿನ ಜನವಸತಿ ಪ್ರದೇಶದಲ್ಲಿಚಿರತೆ ಪ್ರತ್ಯಕ್ಷದ ಸುದ್ದಿ ಕೇಳುತ್ತಿದ್ದಂತೆ ಜನತೆ ಬೆಚ್ಚಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಗುಡ್ಡ ಪ್ರದೇಶ ಇಂಧ್ರನಗರ, ಸಂಜಯ್ ಗಾಂಧಿ ನಗರದಲ್ಲಿ ರಾತ್ರಿಯ ವೇಳೆ ಒಬ್ಬೊಬ್ಬರೇ ಓಡಾಡದಂತೆ ಪೊಲೀಸರು ದ್ವನಿವರ್ದಕದ ಮೂಲಕ ಸಂದೇಶ ನೀಡಿದ್ದಾರೆ.