ಬಳ್ಳಾರಿ, ಆ.24: ನಗರದ ಕೌಲ್ ಬಜಾರ್ ಫ್ಲೈ ಓವರ್ ಮೇಲೆ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ತಾಲೂಕಿನ ಯರಗುಡಿ ಗ್ರಾಮದ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರ್ಡ್ ನ್ ವೀರೇಶ (35) ಪತ್ನಿ ಅಂಜಲಿ(30) ಮಕ್ಕಾಳದ ದಿನೇಶ್(5) ಮತ್ತು ಆದ್ಯ (3) ಅವರನ್ನು ಕರೆದುಕೊಂಡು ಬೈಕ್ ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿ
ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕೌಲ್ ಬಜಾರ್ ನಲ್ಲಿರುವ ಪತ್ನಿ ಮನೆಗೆ ಪ್ಲೈ ಓವರ್ ಮೇಲೆ ತೆರಳುವಾಗ . ಹಿಂಬದಿಯಿಂದ ಬಂದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ವೀರೇಶ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಆಯತಪ್ಪಿ ವೀರೇಶ್, ಆತನ ಪತ್ನಿ ಅಂಜಲಿ, ಮಗ ದಿನೇಶ್ ಪಕ್ಕದ ಪುಟ್ ಪಾಥ್ ಗೆ ಬಡಿದು ತಲೆಗೆ ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗಳು ಆಧ್ಯ ಗಾಯಗೊಂಡಿದ್ದು ವಿಮ್ಸ್ ನಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಠಾಣೆಯ ಸಿಪಿಐ ನಾಗರಾಜ್ ತಿಳಿಸಿದ್ದಾರೆ.
ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಅವರು ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಈ ರೀತಿ ಅಪಘಾತಗಳು ನಗರದಲ್ಲಿ ಸಂಭವಿಸುತ್ತಿರುವ ಬಗ್ಗೆ ವಿಮ್ಸ್ ಆಸ್ಪತ್ರೆಯಲ್ಲಿಯೇ ಎಸ್ಪಿ ಅವರೊಂದಿಗೆ ಸಭೆ ನಡೆಸಿ ಬೆಳಿಗ್ಗೆ ಪೀಕ್ ಅವರ್ ನಲ್ಲಿ ನಗರದಲ್ಲಿ ಟಿಪ್ಪರ್ ಲಾರಿಗಳ ಓಡಾಟ ನಿಯಂತ್ರಿಸುವ ಕುರಿತು ಚರ್ಚಿಸಿದರು.