ಕನಕ ಭವನ ಶಂಕುಸ್ಥಾಪನೆ ಕುರಬರ ಸಮಾಜದವರಿಂದ ಪತ್ರಿಕಾಗೋಷ್ಠಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಸಿರುಗುಪ್ಪ:- ನಗರದ ಎಸ್ ಎಲ್ ವಿ ಹೊಟೆಲ ನಲ್ಲಿ ತಾಲೂಕ ಕುರುಬರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದರು.ಪತ್ರಿಕಾ ಗೋಷ್ಠಿಯನ್ನುದ್ದೆಶಿಸಿ ತಾಲೂಕ ಅಧ್ಯಕ್ಷ ದಮ್ಮೂರ ಸೋಮಪ್ಪ ಮಾತನಾಡಿ ನಗರದ ಹೊರಹೊಲಯದ ಸಾಯಿಬಾಬಾ ದೆವಸ್ಥಾನದ ಎದರುಗಡೆ ಇರುವ ಹಳೆಕೊಟೆ ಬೀರಲಿಂಗೇಶ್ವರ ದೇವಸ್ಥಾನ ಕಮಿಟಿ ತಾಲೂಕ ಕುರಬರ ಸಂಘಕ್ಕೆ ನಿಡಿದ ಜಾಗದಲ್ಲಿ ಇದೆ ತಿಂಗಳ ದಿನಾಂಕ 18ರಂದು ಭಾನುವಾರ ಕನಕ ಭವನ ಶಂಕುಸ್ಥಾಪನೆ ನೇರವೆರಲಿದ್ದು
ಈ ಭವನವು 1.75 ಸೆಂಟ್ ಜಾಗದಲ್ಲಿ ಕಟ್ಟಡ ಕಟ್ಟಲಾಗುತ್ತಿದ್ದು ಉಳಿದ 3ಎಕರೆ 50ಸೆಂಟ್ಟ ಸ್ಥಳವನ್ನು ಕಾಗಿನೇಲೆ ಗುರುಪಿಟಕ್ಕೆ ನೀಡಲಾಗುವದು ಕನಕಭವನವು 5ಕೊಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದ್ದು ಈಗಾಗಲೆ ಶಾಸಕ ಎಮ್ ಎಸ್ ಸೋಮಲಿಂಗಪ್ಪನವರು ಮುಖ್ಯ ಮಂತ್ರಿ ನಿದಿಯಿಂದ ಒಂದು ಕೊಟಿ ಮುಂಜುರು ಮಾಡಿದ್ದು ಹಿಂದಿನ ಸರ್ಕಾರದಲ್ಲಿ 50ಲಕ್ಷ ಮುಂಜುರಾಮಾಡಲಾಗಿದೆ ಎಂದು ತಿಳಿಸಿದರು .ಕನಕಭವನವು ಎರಡು ವರ್ಷದಲ್ಲಿ ಎಲ್ಲಾ ಸಮುದಾಯದ ಸೇವೆಗೆ ಲಬ್ಯವಿರುತ್ತದೆ ಎಂದು ತಿಳಿಸಿದ ಅವರು
ಕಾರ್ಯಕ್ರಮಕ್ಕೆ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ಕಾಗಿನೆಲೆ ಪರಮಪೂಜ್ಯ ಶ್ರೀಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು. ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ತಿಂಥಣಿ ಬ್ರಿಜ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಶ್ರೀ ರಾಮುಲು
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಶ್ರೀ ಕೋಟಾ ಶ್ರೀನಿವಾಸಪೂಜಾರಿ, ಶಾಸಕ ಕೆ ಎಸ್ ಈಶ್ವರಪ್ಪ , ಕರ್ನಾಟಕ ರಾಜ್ಯ ಕುರಿ ಅಭಿವೃದ್ದಿ ನಿಗಮದ ಅದ್ಯಕ್ಷರಾದ ಧರ್ಮಣ್ಣ ದೊಡ್ಡ ಮನಿ , ಮಾಜಿ ಸಂಸರಾದ ವೀರುಪಾಕ್ಷಪ್ಪ , ಸಭಾಪತಿಯವರಾದ ರಘುನಾಥ್ ರಾವ್ ಮಲ್ಕಾಪುರೆ ,ಮಾಜಿ ಸಚಿವರಾದ ಬಂಡೆಪ್ಪ ಕಶ್ಯಾಂಪುರ,ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ , ಶಾಸಕರಾದ ರಾಘವೇಂದ್ರ ಹಿನ್ನಾಳ,ಶಾಸಕರಾದ ಬೈರತಿ ಬಸವರಾಜ ಆಂದ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವೆ ಶ್ರೀ ಮತಿ ಉಷಾ ,ಸೇರಿದಂತೆ ಅನೇಕ ಮಂತ್ರಿ ಗಳು ಮತ್ತು ಮಾಜಿ ಮಂತ್ರಿಗಳು ಶಾಸಕರು ಮತ್ತು ಸಮುದಾಯದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಾಲೂಕ ಕುರುಬರ ಸಂಘದ ಪ್ರದಾನ ಕಾರ್ಯದರ್ಶಿ ಕರಿಬಸ್ಸಪ್ಪ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಯ್ಯ ಕಜಾನ್ಸಿ ಪ್ಯಾಟೆಪ್ಪ ಶಂಕ್ರಪ್ಪ ಗೊರವರ ಶ್ರೀ ನಿವಾಸ ಮಾರೆಪ್ಪ ಹುಲ್ತಿಬಿಮಣ್ಣ ಹನುಮೇಶ ಮಾರೆಪ್ಪ ಉಮೆಶ ಚಂದ್ರಪ್ಪ. ಉಪಸ್ಥಿತರಿದ್ದರು.

 

 

Share and Enjoy !

Shares