ಹಟ್ಟಿಚಿನ್ನದಗಣಿ : ಹಟ್ಟಿ ಚಿನ್ನದ ಗಣಿಯ ಕ್ಯಾಂಪ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ತಮಿಳು, ತೆಲುಗು ಹಾಗೂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೆ ದಿನವೂ ರಾಷ್ಟ್ರಧ್ವಜ ಹಾರಾಡಿದೆ.
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಶನಿವಾರ ಹಾರಿಸಿದ್ದ ರಾಷ್ಟ್ರಧ್ವಜ ಭಾನುವಾರ ರಾತ್ರಿ ೭.೩೦ರವರೆಗೆ ಎರಡು ದಿನಗಳ ಕಾಲ ಹಾರಾಡಿದೆ.
ಇಳಿಸುವವದನ್ನು ಮರೆತು ಇಂದು ರಾತ್ರಿ 8 ಗಂಟೆಯ ವರೆಗೆ ದ್ವಜ ಹಾರಾಡಿದ್ದು ಪತ್ರಕರ್ತರು ಬಿ ಇ ಓ ಹುoಬಣ್ಣ ರಾಥೋಡ್ ಇವರ ಗಮನಕ್ಕೆ ತಂದ ಮೆಲೆ , ನಂತರ ಮುಖ್ಯ ಶಿಕ್ಷಕ ಚಂದ್ರಶೇಖರ್ ಕಂಬಾರ್ ಧ್ವಜವನ್ನು ಕೆಳಗೆ ಕಳಿಸಿದರು. ರಾಷ್ಟ್ರದ್ವಜ ಇಳಿಸದೆ ಇರೊದಕ್ಕೆ ಕಾರಿಣಿಬೂತರಾದರ ಮೇಲೆ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಯಲ್ಲಪ್ಪ ಮಾಚನೂರು ಡಿಎಸ್ಎಸ್ ಮುಖಂಡರು ರಾಜೇಶ್ ಪೂಲಭಾವಿ ಕರುನಾಡ ವಿಜಯ ಸೇನೆ ಕಾರ್ಯಧ್ಯಕ್ಷ ಇನ್ನು ಇತರರು ಆಗ್ರಹಿಸಿದ್ದಾರೆ.