ಕೇವಲ ಒಂದು ದಿನ ಗೈರಾದ ವಿದ್ಯಾರ್ಥಿಗೆ ದುದ್ದು ಪುಡಿ ಕಾಲೇಜು ಮುಖ್ಯಸ್ಥ ನಿಂದ ಬಾಸುಂಡೆ ಬರುವಂತೆ ಹಲ್ಲೆ

ವಿಜಯನಗರ ವಾಣಿ
ರಾಯಚೂರು ಜಿಲ್ಲೆ

ಸಿಂಧನೂರು:ದುದ್ದು ಪುಡಿ ಪಿಯುಸಿ ಕಾಲೇಜಿನ ಮುಖ್ಯಸ್ಥ ಕಾಲೇಜಿಗೆ ಗೈರಾದ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಈ ಘಟನೆ ಖಂಡಿಸಿ ಪಾಲಕರ ಹಾಗೂ ಸಂಘ ಸಂಸ್ಥೆಗಳ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮಣಿಕಂಠ ಎನ್ನುವ ವಿದ್ಯಾರ್ಥಿ ನಗರದ ಆದರ್ಶ ಕಾಲೊನಿಯಲ್ಲಿರುವ ದುದ್ದು ಪುಡಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು. ಭಾನುವಾರ ವಿಶೇಷ ತರಗತಿಗೆ ಗೈರಾದ ಹಿನ್ನೆಲೆ ಕಾಲೇಜಿನ ಮುಖ್ಯಸ್ಥ ನಾರಾಯಣ್ ವಿದ್ಯಾರ್ಥಿಯೊಂದಿಗೆ ಗುಂಡಾ ವರ್ತನೆ ತೊರಿ ಮನಸೋ ಇಚ್ಛೆ ಪ್ಲಾಸ್ಟಿಕ್ ಪೈಪ್ ನಿಂದ ಬಾಸುಂಡೆ ಬರುವ ರೀತಿ ಹಲ್ಲೆ ನಡೆಸಿದ ಕಾರಣ ಪಾಲಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಕಾಲೇಜಿಗೆ ತೆರಳಿ ಕಾಲೇಜ್ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು.

ವಿಧ್ಯಾರ್ಥಿ ಮಾತನಾಡಿ, ಅನಾರೋಗ್ಯದ ಹಿನ್ನೆಲೆ ಭಾನುವಾರ ವಿಶೇಷ ತರಗತಿಗೆ ಗೈರಾಜರು ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ತಿಳಿಸಿದ್ದೇನೆ.ಆದರೆ ಸೋಮವಾರ ಕಾಲೇಜಿನ ಸಿ ಇ ಓ ನಾರಾಯಣ ಅವರು ಸ್ಟಾಪ್ ರೂಮಿಗೆ ಕರೆದುಕೊಂಡು ಹೋಗಿ ಫೈಬರ್ ಪೈಪ್ ನಿಂದ ಅಂಗಲಾಚಿ ಬೇಡಿಕೊಂಡರೂ ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರು ಹಾಕಿದ್ದು ಮನುಕೂಲವೇ ನಾಚುವಂತಾಗಿತ್ತು.

ವಿದ್ಯಾರ್ಥಿಯ ಪಾಲಕರು ಮಾತನಾಡಿ ನನ್ನ ಮಗ ಓದಿನಲ್ಲಿ ಮುಂದೆ ಬರದಿದ್ದರೂ ಪರವಾಗಿಲ್ಲ.ಈರೀತಿ ಹಲ್ಲೆ ನಡೆಸಿರುವುದು ಎಷ್ಟು ಸರಿ ?ಒಂದು ವೇಳೆ ನನ್ನ ಮಗ ಸತ್ತಿದ್ದರೆ ಅದಕ್ಕೆ ಯಾರು
ಹೊಣೆಗಾರಿಕೆಯಾಗುತ್ತಿದ್ದರೂ,ನನ್ನ ಮಗನನ್ನು ಹೊಡೆಯಲು ಅಧಿಕಾರ ಕೊಟ್ಟಿದ್ದು ಯಾರು?ಎಂದು ಕಾಲೇಜಿನ ಮುಖ್ಯಸ್ಥರನ್ನು ಪ್ರಶ್ನೆಸಿದರು.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರ ಠಾಣಾ ಪಿಎಸ್ ಐ ಸೌಮ್ಯ ಅವರು ಕಾಲೇಜಿನ ಮುಖ್ಯಸ್ಥರಾದ ನಾರಾಯಣ ಅವರನ್ನು ಠಾಣೆಗೆ ಕರೆದುಕೊಂಡು ಹೋದರು. ಆದರೆ ವಿದ್ಯಾರ್ಥಿ ಮೇಲೆ ಮನುಕೂಲವೇ ನಾಚುವಂತೆ ಹಲ್ಲೆ ನಡೆಸಿದರೂ ಕೂಡ ಪ್ರಕರಣ ದಾಖಲಾಗದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Share and Enjoy !

Shares