ಸಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದ ಪೋಲಿಸರು.

Share and Enjoy !

Shares
Listen to this article

ರಾಯಚೂರು ಜಿಲ್ಲೆ.
ವಿಜಯನಗರ ವಾಣಿ ಸುದ್ದಿ

ಸಿಂಧನೂರು: ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಆಯುಧ ಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಹಿನ್ನೆಲೆ ಕಳೆಗುಂದಿದ ದಸರಾ ಹಬ್ಬವು ಈ ಬಾರಿ ಸಂತಸ ಮೂಡಿಸಿದ್ದು. ಸಿಪಿಐ ರವಿಕುಮಾರ್, ಹಾಗೂ ಪಿಎಸ್ಐ ಯರಿಯಪ್ಪ, ಒಳಗೊಂಡಂತೆ ಹಲವು ಸಿಬ್ಬಂದಿಗಳು ಸಂಪ್ರದಾಯಿಕ ಉಡುಗೆಗಳನ್ನು ತೊಡುವುದರ ಮೂಲಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರಗಳಿಗೆ, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಯುಧ ಪೂಜೆ ನೆರವೇರಿಸಿ, ಎಲ್ಲಾ ಪೊಲೀಸ್ ಸಿಬ್ಬಂದಿಗಳು ಪರಸ್ಪರ ಶುಭಾಶಯಗಳನ್ನು ತಿಳಿಸುವುದರ ಮೂಲಕ ಆಯುಧ ಪೂಜೆ ಆಚರಿಸಿದ್ದು. ನೋಡುಗರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಎಲ್ಲಾ ಪೋಲಿಸ್ ಸಿಬ್ಬಂದಿಗಳು, ಉಪಸ್ಥಿತರಿದ್ದರು.

Share and Enjoy !

Shares