ಕಾಮಗಾರಿ ಕಳಪೆಯಾದರೆ ಸರಿಪಡಿಸುವ ಜವಾಬ್ದಾರಿ ನನ್ನದು,ಮಾಡುವೆ : ಶಾಸಕ ವೆಂಕಟರಾವ್ ನಾಡಗೌಡ

Share and Enjoy !

Shares

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ.

ಸಿಂಧನೂರು: ಕಾಮಲೆ ಕಣ್ಣಿಗೆ ಲೋಕಾನೆ ಹಚ್ಚಗೆ ಕಾಣುವುದು. ನಮ್ಮ ಮನೆಯಲ್ಲಿ ಯಾರು ಗುತ್ತೆದಾರರು ಇಲ್ಲ. ಕಾಮಗಾರಿ ಕಳಪೆಯಾದರೆ ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಸರಿಪಡಿಸುವೆ. 48% ಶಾಸಕ ಎಂದು ನನ್ನನ್ನು ಕರೆಯುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಒಂದೇ ವಾರದಲ್ಲಿ ದಾಖಲೆ ಸಹಿತ ಅವರ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನ ಜನತೆ ಮುಂದಿಡಲಾಗುವುದು.ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ತಾಲೂಕಿನ ಕುನ್ನಟಗಿ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಫಿಕಾಪ್ ಡ್ಯಾಂ. ಕೊಚ್ಚಿ ಹೋಗಿದ್ದು. ಮಂಗಳವಾರದಂದು ಮಾಜಿ ಸಚಿವ ಶಾಸಕ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರತಿ ಬಾರಿಯೂ ಕ್ಷೇತ್ರದ ಜನತೆಗೆ ಕಳಪೆ ಕಾಮಗಾರಿ ಕಂಡು ಬಂದರೆ ಗಮನಕ್ಕೆ ತರುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಕಳಪೆಯಾಗಿದ್ದರೆ ಸರಿಪಡಿಸುವುದು ನನ್ನ ಜವಾಬ್ದಾರಿ ಅದನ್ನು ನಾನು ಸರಿಪಡಿಸುವೆ.

ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಸೂಚನೆ ನೀಡಿದರೂ ಬಂದಿಲ್ಲ. ಇವರ ಮೇಲೆ ಕಠಿಣ ಕ್ರಮ ಜರಿಗಿಸಲಾಗುವುದು. ಜೊತೆಗೆ ನಮ್ಮ ಮನೆಯಲ್ಲಿ ಯಾರು ಗುತ್ತಿಗೆದಾರರು ಇಲ್ಲ. ಕಾಮಗಾರಿ ನಡೆಯುವ ಸ್ಥಳಕ್ಕೆ ಯಾರು ಬಂದು ನಿಂತಿಲ್ಲ. ಕಾಂಗ್ರೆಸ್ ಮುಖಂಡ ಬಾಬುಗೌಡ ಬಾದರ್ಲಿ ನನ್ನನ್ನು 48% ಶಾಸಕ ಎಂದು ಕರೆದಿದ್ದು. ಕಾಂಗ್ರೆಸ್ ಒಂದು ಮನೆ ಹರಿದು ಮೂರು ಬಾಗಿಲಾಗಿದ್ದು. ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ. ಕೆಲವೇ ದಿನಗೊಳಗಾಗಿ ದಾಖಲೆ ಸಹಿತ ಅವರ ಅವಧಿಯಲ್ಲಿ ನಡೆದ ಹಗರಣವನ್ನು ಜನತೆಯ ಮುಂದೆ ಇಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ದ ಟೀಕಾಪ್ರಹಾರ ನಡೆಸಿದರು.

ಈ ಸಂದರ್ಭದಲ್ಲಿ ವೆಂಕೋಬ ಕಲ್ಲೂರು, ಜಕ್ಕರಾಯ್, ಅಮರೇಗೌಡ, ವಿರುಪನಗೌಡ, ನರಸಪ್ಪ, ನಿರುಪಾದಿ, ಸುರೇಶ, ವಿಜಯ, ಈರಪ್ಪ, ಬಸವರಾಜ, ಶಂಕರಗೌಡ, ಬಾಬು, ಶರಣೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share and Enjoy !

Shares