ವಿಜಯನಗರವಾಣಿ ಸುದ್ದಿ
ಸಿರುಗುಪ್ಪ :ತಾಲೂಕಿನ ರಾರಾವಿ ಗ್ರಾಮದ ಐತಿಹಾಸಿಕ ಗ್ರಾಮ ದೇವತೆ ಹುತ್ತಿನ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಮಹಿಳೆಯರು ರಥ ಎಳೆದು ಸಂಭ್ರಮಿಸಿದರು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜೆ ಹೋಮ ,ಅಭಿಷೇಕ ಹಾಗೂ ದೇವಿಯ ಪಲ್ಲಕ್ಕಿಯತ್ಸವ ಸೇರಿದಂತೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ :ಶರವನ್ನರಾತ್ರಿ ಅಂಗವಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ವಿಜಯದಶಮಿ ವರೆಗೂ ದೇವಿಗೆ ನಿತ್ಯ ವಿಶೇಷ ಪೂಜೆ, ಅಲಂಕಾರ ನಡೆಸಿ 600 ಕ್ಕೂ ಹೆಚ್ಚು ಮುತ್ತೈದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಡಲಾಯಿತು.
ಗ್ರಾಮಸ್ಥರೊಂದಿಗೆ ಸುತ್ತಮುತ್ತಲಿನ ವಿವಿಧ ಗ್ರಾಮದ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ಹುತ್ತಿನ ಯಲ್ಲಮ್ಮ ದೇವಿಯ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದರು .
ಪ್ರತಿವರ್ಷ ಸಂಪ್ರದಾಯದಂತೆ ಸಂಜೆ 6 ಗಂಟೆ ನಂತರ ಹೂವಿನ ರಥೋತ್ಸವ ಪುರುಷರು ಎಳೆದರು ಈ ವರ್ಷ ವಿಶೇಷವಾಗಿ ಮಹಿಳೆಯರಿಂದ ರಥೋತ್ಸವ ಎಳೆಯುವುದು ವಿಶೇಷವಾಗಿತ್ತು .
ಯಲ್ಲಮ್ಮ ದೇವಿಯ ರಥೋತ್ಸವ ಜರುಗಿದ ನಂತರ ಬನ್ನಿ ಮರದಿಂದ ಬನ್ನಿಯನ್ನು ತಂದು ಹಿರಿಯರಿಗೆ ಕಿರಿಯರು ಬನ್ನಿ ಪರಸ್ಪರ ವಿನಿಮಯ ಮಾಡಿಕೊಂಡು ವಿಜಯದಶಮಿ ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿಯ ಪುರಾಣ ಪ್ರವಚನಕಾರ ಮಲ್ಲಿಕಾರ್ಜುನ ಶಾಸ್ತ್ರಿಗಳು ಖೇಳಗಿಮಠ, ಖ್ಯಾತ ಸಂಗೀತ ಹಾರ್ಮೋನಿಯಂ ಚಿದಾನಂದ ಗವಾಯಿ ರಾರಾವಿ, ತಬಲವಾದಕ ರಾಮಲಿಂಗಪ್ಪ, ದೇವಸ್ಥಾನದ ಆಡಳಿತ ಮಂಡಳಿಯವರಾದ ಚಂದ್ರಪ್ಪ, ಸೋಮಯ್ಯ, ಬಸವನಗೌಡ, ಮಲ್ಲಯ್ಯ,ಈಶಪ್ಪ,ಡಿ ಲಿಂಗಯ್ಯ, ವೀರಭದ್ರಗೌಡ,ಹಾಗೂ ಸರ್ವ ಭಕ್ತರು ಪಾಲ್ಗೊಂಡಿದ್ದರು.