ಬಳ್ಳಾರಿ ಅಂಗಳದಲ್ಲಿ ಮತ್ತೇ ಗುಡುಗಿದ ವಿಪಕ್ಷ ನಾಯಕ ಸಿದ್ದರಾಮಯ್ಯ

Share and Enjoy !

Shares
Listen to this article

ವಿಜಯನಗರ ವಾಣಿ
ಬಳ್ಳಾರಿ :ಹಳೆಯ ಸ್ಟೈಲ್ ನಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ
ರೆಡ್ಡಿ ಬ್ರದರ್ಸ್ ಮತ್ತು ರಾಮುಲು ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದ ಅವರು
ಬಳ್ಳಾರಿಗೆ ಬಿಜೆಪಿ ಸರ್ಕಾರ ಒಂದು ರೂಪಾಯಿ ಕೆಲಸ ಮಾಡಿಲ್ಲಾ ಬಳ್ಳಾರಿ ಲೂಟಿ ಹೊಡೆದಿದ್ದೆ ನಿಮ್ಮ ಸಾಧನೆ…
ಗಣಿ ಲೂಟಿ ಮಾಡಿದ್ರಿ, ಇದರ ವಿರುದ್ಧ ಪಾದಯಾತ್ರೆ ಮಾಡಿದ್ವಿ…ಅದರಿಂದ ನೀವು ಜೈಲಿಗೆ ಹೊದ್ರಿ, ಇನ್ನೂ ರೆಡ್ಡಿ ಮೇಲೆ ಕೇಸ್ ಇದ್ದಾವೆ ಎಂದು ಬಳ್ಳಾರಿ ಪಾದಯಾತ್ರೆ ‌ನೆನಪಿಸಿ ವಾಗ್ದಾಳಿ ಮಾಡಿದ ಸಿದ್ದರಾಮಯ್ಯ.

ಶ್ರೀರಾಮುಲು ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಿದ್ದು ಯಾರಪ್ಪ ರಾಮುಲು..?
ಸೋನಿಯಾ ಗಾಂಧಿ ಬಳ್ಳಾರಿ ಯಿಂದ ಲೋಕಸಭೆ ಸದಸ್ಯರಾಗಿದ್ದರು ಕುಡುತಿನಿ ವಿದ್ಯುತ್ ಪ್ರಾಜೆಕ್ಟ್ ತಂದಿದ್ದು ಯಾರು ?೩೩೦೦ ಕೋಟಿ ಅನುದಾನ ತಂದು ಬಳ್ಳಾರಿ ಅಭಿವೃದ್ಧಿ ಮಾಡಿದ್ದು ಸೋನಿಯಾ..ರಾಮುಲು ಏನಪ್ಪ ನಿನ್ನ ಕಾಂಟ್ರಿಬ್ಯುಷನ್ನು ರಾಮುಲು ಚರ್ಚೆ ಮಾಡೋಕೆ ಕರಿತಿಯಾ..?ರಾಮುಲುಗೆ
ಲೂಟಿ ಮಾಡಿದ್ದು ನಿನ್ನ ಸಾಧನೆ…
ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು?
ನಾವು ಬಳ್ಳಾರಿ ಪಾದಯಾತ್ರೆ ಮಾಡಿದ ಮೇಲೆ ಜನಾರ್ಧನ್ ರೆಡ್ಡಿ ಜೈಲಿಗೆ ಹೋಗಬೇಕಾಯಿತು…
ನಿಮಗೆ ಕಾಂಗ್ರೆಸ್ ಅನ್ನು ಪ್ರಶ್ನೆ ಮಾಡಲಿಕ್ಕೆ ಯಾವುದೇ ನೈತಿಕತೆ ಆಧಾರ ಇಲ್ಲ.. ಎಂದು ಆಕ್ರೊಶ ಮುಂದುವರೆಸಿದ ಸಿದ್ದ ರಾಮಯ್ಯ.

Share and Enjoy !

Shares