ಬಳ್ಳಾರಿ:ಸಂಗನಕಲ್ಲು ಬಳಿ ಭಾರತ್ ಜೋಡೊ ಯಾತ್ರೆಯ
ಪಾದಯಾತ್ರಿಗಳಿಗಾಗಿ ನಿರ್ಮಿಸಲಾಗಿರುವ ತಾತ್ಕಾಲಿಕ ಕ್ಯಾಂಪ್ ನಲ್ಲಿ
ಸ್ಥಾಪಿಸಲಾಗಿರುವ ಬೂತ್ ನಲ್ಲಿ ರಾಹುಲ್ ಗಾಂಧಿ ಮತದಾನ ನಡೆಸಿದರು.
ಕಾಂಗ್ರೆಸ್ಸಿನ ಇತರ ಪದಾಧಿಕಾರಿಗಳಂತೆ ಸಹಜವಾಗಿಯೇ ಸರದಿ ಸಾಲಿನಲ್ಲಿ ನಿಂತು ತಮ್ಮ ಪಾಳಿ ಬಂದ ಮೇಲೆ ಬೂತ್ ಒಳಗೆ ಹೋಗಿ
ರಾಹುಲ್ ಮತದಾನ ಮಾಡಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್ ಕೂಡ ಮತದಾನ ನಡೆಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ದೇಶದಾದ್ಯಂತ ಪಕ್ಷದ ಸ್ತ್ರೀ ಪುರುಷರೆಲ್ಲ ಭಾಗವಹಿಸಿ ಮತದಾನ ಮಾಡಿದ್ದು ನನಗೆ ಹೆಮ್ಮೆಯ ವಿಷಯ, ಇದು
ಪಕ್ಷದ ಪ್ರಜಾಸತ್ತಾತ್ಮಕ ಲಕ್ಷಣ ಎಂದು ರಾಹುಲ್ ಗಾಂಧಿ ತಮ್ಮ ಫೇಸಬುಕ್ ಪೇಜ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.