ಆಟೋ ಚಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಸಂಚಾರಿ ಪಿಎಸ್ಐ ಬಸವರಾಜ್.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ.

ರಾಯಚೂರು ಜಿಲ್ಲೆ..

ಸಿಂಧನೂರು: ಸಂಚಾರಿ ಪಿಎಸ್ಐ ಬಸವರಾಜ ಅವರ ನೇತೃತ್ವದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಆಟೋ ಚಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಾಹನ ಚಾಲಕನಾದ ನಾನು, ನನ್ನ ಕುಟುಂಬದ ಸುರಕ್ಷತೆಗೆ, ಸಹ ಪ್ರಯಾಣಿಕರ ಸುರಕ್ಷತೆಗೆ, ಹಾಗೂ ಸಾರ್ವಜನಿಕರ ಸುರಕ್ಷತೆ ಹಿತ ದೃಷ್ಟಿಯಿಂದ ಮಧ್ಯ ಮಾದಕ ದ್ರವ್ಯ ಸೇವನೆ ಮಾಡುವುದಿಲ್ಲ. ಜೊತೆಗೆ ಸೇವಿಸಿ ವಾಹನ ಚಲಾಯಿಸುವುದಿಲ್ಲ. ಕಡ್ಡಾಯವಾಗಿ, ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ, ವಾಹನದ ಎಲ್ಲಾ ದಾಖಲೆಗಳ ಜೊತೆಗೆ, ಅವಲಂಬಿತ ಕುಟುಂಬದ ರಕ್ಷಣೆಗಾಗಿ, ವಿಮೆ ಮಾಡಿಕೊಳ್ಳಲಾಗುವುದು ಎಂದು ಆಟೋ ಚಾಲಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಂಚಾರಿ ಪೊಲೀಸ್ ಸಿಬ್ಬಂದಿಗಳಾದ ಚಂದ್ರು ಕೆ.‌ ಆಟೋ ಚಾಲಕರಾದ ಬಸವರಾಜ, ಉಸ್ಮಾನ್ ಪಾಷಾ, ಮುಜಂದರ್, ಅನ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share and Enjoy !

Shares